ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ ಉಳಿದಿದ್ದರೆ ಮಾಹಿತಿ ನೀಡಿ

Last Updated 23 ನವೆಂಬರ್ 2022, 16:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ನಾಗರಿಕರಿಗೆ ಗುಂಡಿ ಕಂಡುಬಂದರೆ ಅಧಿಕಾರಿಗಳ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಕ್ಷಿಣ ವಲಯ ಆಯುಕ್ತ ಜಯರಾಮ್‌ ರಾಯಪುರ ಹೇಳಿದ್ದಾರೆ.

ದಕ್ಷಿಣ ವಲಯ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸವನಗುಡಿ, ವಿಜಯನಗರ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿ 48 ಹೊಸ ವಾರ್ಡ್‌ಗಳಿವೆ. ಎಲ್ಲ ಮುಖ್ಯ, ಉಪಮುಖ್ಯ ಮತ್ತು ವಾರ್ಡ್ ರಸ್ತೆಗಳಲ್ಲಿ ಇದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿರುತ್ತದೆ. ಹೀಗಿದ್ದರೂ ರಸ್ತೆ ಗುಂಡಿಗಳು ಕಂಡುಬಂದಲ್ಲಿ ದಕ್ಷಿಣ ವಲಯದ ನಿಯಂತ್ರಣ ಕೊಠಡಿ 26566362/ 22975703ಗೆ ಸಾರ್ವಜನಿಕರು ದೂರು ನೀಡಬಹುದು. ಅಲ್ಲದೇ, ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ವಾಟ್ಸ್‌ ಆ್ಯಪ್‌ 9480685704ಗೆ ಜಿಯೋ ಲೊಕೇಷನ್/ವಿಳಾಸ ಇರುವ ರಸ್ತೆ ಗುಂಡಿಗಳ ಚಿತ್ರಗಳನ್ನು ಕಳುಹಿಸಬಹುದು ಎಂದು ಜಯರಾಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT