ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದೇಶಗಳ ಕೃಷಿ ಸಹಕಾರ ಕಾರ್ಯಕ್ರಮಗಳಿಗೆ ಉಜ್ವಲ ಭವಿಷ್ಯ: ರಾನ್ ವರ್ಡೆಂಕ್‌

Last Updated 9 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ಕೃಷಿ ಸಹಕಾರ ಕಾರ್ಯಕ್ರಮಗಳಿಗೆ ಉಜ್ವಲ ಭವಿಷ್ಯವಿದೆ’ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಕೃಷಿ ವ್ಯವಹಾರಗಳ ಸಲಹೆಗಾರ ಡಾ. ಎನ್‌. ರಾನ್ ವರ್ಡೆಂಕ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಜೀನೋಮ್ ಸೀಕ್ವೆನ್ಸಿಂಗ್, ನಿಖರವಾದ ಹವಾಮಾನ ಸ್ಮಾರ್ಟ್ ಅಡಾಪ್ಟಿವ್ ಅಗ್ರಿಕಲ್ಚರಲ್ ಟೆಕ್ನಾಲಜೀಸ್, ಡ್ರೋನ್‌ ಮತ್ತು ರೋಬೊಟಿಕ್ಸ್ ಆಧಾರಿತ ದೊಡ್ಡ ತಂತ್ರಜ್ಞಾನಗಳು, ಡೇಟಾ ಮುನ್ಸೂಚಕ ವಿಶ್ಲೇಷಣೆ ಮತ್ತು ಸಂಸ್ಕರಣೆ ಹಾಗೂ ಮೌಲ್ಯ ಸರಪಳಿ ಅಭಿವೃದ್ಧಿ ಕುರಿತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಧ್ಯಯನ ನಡೆಸಲು ಅಮೆರಿಕ ಆಸಕ್ತಿ ಹೊಂದಿದೆ’ ಎಂದು ತಿಳಿಸಿದರು.

ರಾಗಿ, ಸಿರಿಧಾನ್ಯಗಳು ಮತ್ತು ವಿದೇಶಿ ತರಕಾರಿಗಳ ಬೆಳೆ ಪ್ರಾತ್ಯಕ್ಷಿಕೆಗಳು ಮತ್ತು ಮಣ್ಣು ರಹಿತ ಕೃಷಿ ಘಟಕಗಳಿಗೆ ಭೇಟಿ ನೀಡಿದ ಅವರು ಮಾಹಿತಿ ಪಡೆದುಕೊಂಡರು.

‘ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಕೆ.ಬಿ ಉಮೇಶ ಕರ್ನಾಟಕದ ಕೃಷಿ ಸನ್ನಿವೇಶ ಮತ್ತು ಕೃಷಿ ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಿಸ್ತರಣಾ ನಿರ್ದೇಶಕ ಡಾ. ಕೆ. ನಾರಾಯಣಗೌಡ, ಮತ್ತು ಡಾ. ಎನ್. ಬಿ. ಪ್ರಕಾಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT