ಕೆಐಎಎಲ್‌ನಲ್ಲಿ 2.6 ಕೆ.ಜಿ ಚಿನ್ನ ಜಪ್ತಿ

7

ಕೆಐಎಎಲ್‌ನಲ್ಲಿ 2.6 ಕೆ.ಜಿ ಚಿನ್ನ ಜಪ್ತಿ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್‌) ಮಂಗಳವಾರ ಔನ್ ಮೊಹಮದ್ ಎಂಬಾತನನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ₹ 80 ಲಕ್ಷ ಮೌಲ್ಯದ ಮೂರು ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ.

‘ಬೆಂಗಳೂರಿನ ಮೊಹಮದ್, ಬ್ಯಾಂಕಾಕ್‌ನಿಂದ ‘ಏರ್‌ ಏಷ್ಯಾ ಎಫ್‌ಡಿ–137’ ವಿಮಾನದಲ್ಲಿ ಕೆಐಎಎಲ್‌ಗೆ ಬಂದಿಳಿದ. ಆತನ ಬ್ಯಾಗ್ ಪರಿಶೀಲಿಸಿದಾಗ 2.6 ಕೆ.ಜಿಯ ಚಿನ್ನದ ಗಟ್ಟಿಗಳು ಸಿಕ್ಕವು’ ಎಂದು ಅಧಿಕಾರಿಗಳು ಹೇಳಿದರು.

‘ಗಟ್ಟಿಗಳಿಗೆ ಕಪ್ಪು ಬಣ್ಣದ ಟೇಪ್‌ ಸುತ್ತಿ ಬ್ಯಾಗ್‌ನ ಕೆಳಭಾಗದಲ್ಲಿ ಇಟ್ಟಿದ್ದ ಮೊಹಮದ್, ಅವು ಕಾಣಿಸದಂತೆ ಮೇಲೆ ಪ್ಲಾಸ್ಟಿಕ್ ರಟ್ಟು ಇಟ್ಟು ಹೊಲಿದಿದ್ದ. ಸಿಬ್ಬಂದಿ ಆ ಬ್ಯಾಗ್ ತಪಾಸಣೆ ನಡೆಸುತ್ತಿದ್ದಾಗ ಆತ ಅದನ್ನೇ ದಿಟ್ಟಿಸಿ ನೋಡುತ್ತಿದ್ದ. ಇದರಿಂದ ಅನುಮಾನಗೊಂಡು, ರಟ್ಟು ತೆಗೆದು ನೋಡಿದಾಗ ಗಟ್ಟಿಗಳು ಪತ್ತೆಯಾದವು. ಅವುಗಳನ್ನು ಯಾರು ಕೊಟ್ಟರು? ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !