ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ, ವಿದೇಶಿ ಸಿಗರೇಟ್ ಜಪ್ತಿ; ಇಬ್ಬರು ವಶಕ್ಕೆ

Last Updated 25 ಜನವರಿ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ₹ 19 ಲಕ್ಷ ಮೌಲ್ಯದ ಚಿನ್ನ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ವಿಮಾನದಲ್ಲಿ ದುಬೈನಿಂದ ಬಂದಿದ್ದ ಮೊಹಮ್ಮದ್ ಹಾಗೂ ಅರ್ಶಕ್ ಅಬೂಬಕರ್ ಎಂಬುವರ ಬ್ಯಾಗ್‌ನಲ್ಲಿ ಚಿನ್ನ, ಸಿಗರೇಟ್‌ಗಳು ಸಿಕ್ಕಿವೆ. ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ಆಹಾರ ಪೊಟ್ಟಣಗಳಲ್ಲಿ ಚಿನ್ನ ಹಾಗೂ ಸಿಗರೇಟ್‌ಗಳನ್ನು ಮುಚ್ಚಿಡಲಾಗಿತ್ತು. ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ
ಅಕ್ರಮ ಸಾಗಣೆ ಸಂಗತಿ ಬಯಲಾಗಿದೆ. 165 ಗ್ರಾಂ ಚಿನ್ನ ಮತ್ತು ₹ 5.98 ಲಕ್ಷ ಮೌಲ್ಯದ 29,940 ವಿದೇಶಿ ಸಿಗರೇಟ್‌ಗಳು ಪತ್ತೆಯಾಗಿವೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT