ಬೆಂಗಳೂರು: ಚಿನ್ನದ ಖರೀದಿಯನ್ನು ಒಂದು ವರ್ಷದವರೆಗೆ ಮುಂದೂಡು ವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು ‘ಆಭರಣ’ಗಳಿಗೆ ಅಲ್ಲ, ‘ಬುಲಿಯನ್’ಗಳಿಗೆ. ಹಾಗಾಗಿ ಬುಲಿಯನ್ (ಹೂಡಿಕೆ ಚಿನ್ನ) ಖರೀದಿ ವ್ಯವಹಾರ ಸದ್ಯಕ್ಕೆ ನಿಲ್ಲಿಸಬೇಕು ಎಂದು ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣತಿಳಿಸಿದರು.

ಪ್ರಧಾನಿ ನೀಡಿದ ಕರೆಯ ಸಾಧಕ-ಬಾಧಕ ಕುರಿತು ‘ಪ್ರಜಾವಾಣಿ’ ನಡೆಸಿದ ಮಾತುಕತೆಯಲ್ಲಿ ಅವರು ಈ ಮಾಹಿತಿ ನೀಡಿದರು.

‘ವಿದೇಶಕ್ಕೆ ಹೋಗಬೇಡಿ, ವಾಹನಗಳನ್ನು ಕಡಿಮೆ ಬಳಕೆ ಮಾಡಿ, ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸಿ, ಚಿನ್ನಾಭರಣ ಖರೀದಿ ಮುಂದಕ್ಕೆ ಹಾಕಿ ಎಂಬ ಕರೆಯನ್ನು ಸ್ವಾಗತ ಮಾಡುತ್ತೇನೆ. ಯಾಕೆಂದರೆ ಭಾರತದ ರೂಪಾಯಿ ಸದೃಢ ವಾಗಬೇಕು. ಭಾರತದ ಆರ್ಥಿಕತೆ ಬಲವಾಗ ಬೇಕು’ ಎಂದು ಹೇಳಿದರು.

ಬಂಡವಾಳ ಹೂಡಿಕೆ ಚಿನ್ನ (ಬುಲಿಯನ್), ನಿತ್ಯ ಬಳಕೆಯ ಆಭರಣದ ಚಿನ್ನ ನಮ್ಮ ಸಂಸ್ಕೃತಿ ಸಂಸ್ಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದು ಅನಿವಾರ್ಯ. ಅದನ್ನು ಖರೀದಿಸಿ. ಬಂಡವಾಳ ಹೂಡಿಕೆ ಚಿನ್ನವನ್ನು ನಿಲ್ಲಿಸಿದರೆ ಶೇ 50ರಷ್ಟು ಚಿನ್ನ ಖರೀದಿ ಕಡಿಮೆಯಾಗುತ್ತದೆ ಎಂದರು.

ಆಭರಣವಾಗಿ ಖರೀದಿ ಮಾಡುವುದಕ್ಕೆ ಸಮಸ್ಯೆ ಇಲ್ಲ. ಆದರೆ, ಹೂಡಿಕೆಯಾಗಿ ‘ಬುಲಿಯನ್’ ಅಂದರೆ ಕಾಯಿನ್, ಬಿಸ್ಕೆಟ್ಗಳನ್ನು ಖರೀದಿಸುತ್ತಾರೆ. ಇಂದು ಒಮ್ಮೆ ಖರೀದಿಯಾಗಿ ಸಂಗ್ರಹ ವಾದರೆ ಮತ್ತೆ ವ್ಯವಹಾರಕ್ಕೆ ಬರುವುದು ಬಹಳ ಕಡಿಮೆ. ಇದರಿಂದ ಚಿನ್ನಕ್ಕೆ ಮತ್ತಷ್ಟು ಬೇಡಿಕೆ ಉಂಟಾಗುತ್ತದೆ. ಆಗ ಸಹಜವಾಗಿಯೇ ಚಿನ್ನದ ದರ ಹೆಚ್ಚಳವಾಗುತ್ತದೆ ಎಂದು ವಿವರಿಸಿದರು.

‘ಚಿನ್ನಾಭರಣ ವ್ಯವಹಾರದಲ್ಲಿ ಇರುವವರಿಗೆ ತೊಂದರೆ ಉಂಟಾಗಿರುವುದು ನಿಜ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಚಿನ್ನದ ಆಮದು ಮೇಲಿನ ಸುಂಕ ಶೇ 6 ಇದ್ದಿದ್ದನ್ನು ಶೇ 15ಕ್ಕೆ ಏರಿಕೆ ಮಾಡಿದ್ದರಿಂದ ಒಮ್ಮೆಲೇ ಚಿನ್ನ, ಬೆಳ್ಳಿ ಬೆಲೆ ಜಾಸ್ತಿಯಾಗಿದೆ. ಇದು ಬಡವರಿಗೆ ತೊಂದರೆಯಾಗುತ್ತದೆ. ಬಂಗಾರ ಬಲು ಭಾರವಾಗಿದೆ. ಇದು ಉದ್ಯಮಕ್ಕೆ ಹೊಡೆತ ಎಂಬುದನ್ನು ಒಪ್ಪುತ್ತೇನೆ. ಸುಂಕ ಜಾಸ್ತಿ ಮಾಡಿದರೆ ಕಳ್ಳಸಾಗಣೆ ಹೆಚ್ಚಾಗುತ್ತದೆ. ಗ್ರಾಹಕರಿಗೆ ಚಿನ್ನದ ಬಿಸ್ಕೆಟ್, ಚಿನ್ನದ ನಾಣ್ಯ ಮಾರಬಾರದು ಎಂದು ನಿಯಮ ರೂಪಿಸಬೇಕು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-4-478432789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.