ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟಿದ್ದವ ಬಂಧನ

Last Updated 28 ಡಿಸೆಂಬರ್ 2021, 18:44 IST
ಅಕ್ಷರ ಗಾತ್ರ

ಬೆಂಗಳೂರು: ಒಳ ಉಡುಪು ಹಾಗೂ ಗುದನಾಳದಲ್ಲಿ ಚಿನ್ನ ಅಡಗಿಸಿಕೊಂಡು ವಿದೇಶಗಳಿಂದ ವಿಮಾನದ ಮೂಲಕ ನಗರಕ್ಕೆ ಬಂದಿದ್ದ ಇಬ್ಬರು ಆರೋಪಿಗಳನ್ನು ಕಸ್ಟಮ್ಸ್‌ ಅಧಿಕಾರಿಗಳುಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ₹72.4 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.

‘ಬಂಧಿತರಿಬ್ಬರೂ ತಮಿಳುನಾಡಿನವರು. 28 ವರ್ಷದ ಆರೋಪಿಯೊಬ್ಬ ಇದೇ 25ರಂದು ಶಾರ್ಜಾದಿಂದ ಏರ್‌ ಅರೇಬಿಯಾ ಜಿ9–496 ವಿಮಾನದಲ್ಲಿ ನಗರಕ್ಕೆ ಬಂದಿದ್ದ. ಆತ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ್ದ ಸಿಬ್ಬಂದಿ ಹಿಡಿದು ವಿಚಾರಿಸಿದ್ದರು. ಈ ವೇಳೆ ಚಿನ್ನ ಕಳ್ಳಸಾಗಣೆ ವಿಷಯ ಬಾಯ್ಬಿಟ್ಟಿದ್ದ. ಆತ ತನ್ನ ಒಳ ಉಡುಪಿನಲ್ಲಿ ₹52.5 ಲಕ್ಷ ಮೌಲ್ಯದ 1.1ಕೆ.ಜಿ. ಚಿನ್ನ ಅವಿತಿಟ್ಟುಕೊಂಡಿದ್ದ’ ಎಂದು ಕಸ್ಟಮ್ಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘25 ವರ್ಷದ ಮತ್ತೊಬ್ಬ ಯುವಕ ಕೂಡ ಇದೇ ವಿಮಾನದಲ್ಲಿ ನಗರಕ್ಕೆ ಬಂದಿದ್ದ. ಆತ ದ್ರವರೂಪದ ಚಿನ್ನವನ್ನೊಳಗೊಂಡ ಉದ್ದನೆಯ ಮಾತ್ರೆಗಳನ್ನು ಗುದನಾಳದಲ್ಲಿ ಅಡಗಿಸಿಟ್ಟುಕೊಂಡಿದ್ದ. ಆತನಿಂದ ₹19.9 ಲಕ್ಷ ಮೌಲ್ಯದ 421 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT