ಶನಿವಾರ, ಡಿಸೆಂಬರ್ 7, 2019
25 °C

ನಕ್ಕು, ನಲಿದ ಸರ್ಕಾರಿ ಶಾಲೆ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಂಬೆಸಿ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಕಲರ್ಸ್ ಆಫ್ ಲೈಫ್ ಸ್ವಯಂಸೇವಾ ಸಂಸ್ಥೆ ಹಾಗೂ ಎಲ್‍ಎಕ್ಸೆಲ್ ಐಡಿಯಾ ಕಂಪನಿಯು ಈಚೆಗೆ ಸರ್ಕಾರಿ ಶಾಲೆಯ ಮಕ್ಕಳ ಜತೆ  ಮಕ್ಕಳ ದಿನ ಆಚರಿಸಿದವು.

ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.  ಎಂಬೆಸಿ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಾಲ್ಕನೇ ವರ್ಷಾಚರಣೆ ಸಂಭ್ರಮದಲ್ಲಿರುವ ‘ಸಿಂಚನಾ’ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಸ್ಪರ್ಧೆಗಳಲ್ಲಿ 14 ಸರ್ಕಾರಿ ಶಾಲೆಯ ಸಾವಿರಾರು ಮಕ್ಕಳು ಭಾಗವಹಿಸಿದ್ದರು. 

ನೀರಿನ ಸಂಪನ್ಮೂಲ ಉಳಿಸುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಾಗೃತ ಗೊಳಿಸಲು ‘ನೀರನ್ನು ಉಳಿಸಿ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. 

 ಕಲರ್ಸ್ ಆಫ್ ಲೈಫ್ ಟ್ರಸ್ಟಿ ಸಿಮ್ರಾನ್ ಚಂದೋಕ್, ಸರ್ಕಾರಿ ಶಾಲೆಗಳನ್ನು ಶ್ರೇಷ್ಠ ಸಂಸ್ಥೆಗಳಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ ಎಂದು ವಿರ್ವಾನಿ ತಿಳಿಸಿದರು. 

ಎಂಬೆಸಿ ಸಮೂಹದ ಸಮುದಾಯ ಔಟ್‍ ರಿಚ್‍ನ ಮುಖ್ಯಸ್ಥ ಶೈನಾ ಗಣಪತಿ ಮಾತನಾಡಿದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು