ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀಮಂತರು, ಬಡವರ ನಡುವಿನ ಹೋರಾಟ’

ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಮುನೀರ್ ಕಾಟಿಪಳ್ಳ
Last Updated 16 ಏಪ್ರಿಲ್ 2018, 10:28 IST
ಅಕ್ಷರ ಗಾತ್ರ

ಮಂಗಳೂರು: ‘ಈ ಬಾರಿಯ ವಿಧಾನಸಭಾ ಚುನಾವಣೆ ಬಡವರು ಮತ್ತು ಶ್ರೀಮಂತರ ನಡುವಿನ ಹೋರಾಟ. ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬಡವರು ತಮ್ಮ ಪರವಾಗಿ ಧ್ವನಿ ಎತ್ತು ವವರನ್ನೇ ಬೆಂಬಲಿಸಬೇಕು’ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯೂ ಆಗಿರುವ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ನಗರದ ಡಾನ್‌ ಬಾಸ್ಕೊ ಸಭಾಂ ಗಣದಲ್ಲಿ ಸಿಪಿಎಂ ಭಾನುವಾರ ಆಯೋಜಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಕಾಂಗ್ರೆಸ್‌ ಯಾವಾಗಲೂ ಚುನಾವಣೆಯಲ್ಲಿ ಧರ್ಮ ದ ವಿಚಾರವನ್ನು ಎಳೆದು ತಂದು ಜನರ ದಿಕ್ಕು ತಪ್ಪಿಸುತ್ತವೆ. ಆದರೆ, ಈ ಬಾರಿ ಧರ್ಮ ಚುನಾವಣಾ ವಿಷಯವೇ ಆಗಬಾರದು. ಶ್ರೀಮಂತರ ಹಿಡಿತದಿಂದ ರಾಜಕೀಯವನ್ನು ಹೊರತರುವ ಸಂದೇಶವನ್ನು ಮಂಗಳೂರಿನಿಂದ ಕಳುಹಿಸಬೇಕಿದೆ’ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಶ್ರೀಮಂತರಿಗೆ ಟಿಕೆಟ್‌ ನೀಡುತ್ತವೆ. ಹಣವನ್ನೇ ಆಧಾರವಾಗಿ ಇಟ್ಟುಕೊಂಡು ಚುನಾವಣೆಗೆ ಬರುವ ವರು ಶ್ರೀಮಂತರ ಹಿತಾಸಕ್ತಿಗಳ ಪರ ಮಾತ್ರ ಇರುತ್ತಾರೆ. ಅವರಿಗೆ ಬಡವರ ಕಷ್ಟಗಳ ಅರಿವು ಇರುವುದಿಲ್ಲ. ಅರಿವು ಇದ್ದರೂ ಮಾತನಾಡುವುದಿಲ್ಲ. ಜಿಲ್ಲೆ ಯಲ್ಲಿ ಶೇಕಡ 90ರಷ್ಟು ಮಂದಿ ಬಡವರು ಇದ್ದಾರೆ. ಎಲ್ಲ ಬಡವರೂ ಸೇರಿ ಸುನೀಲ್‌ಕುಮಾರ್‌ ಬಜಾಲ್‌ ಅವರನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ವಿಧಾನಸಭೆಗೆ ಕಳುಹಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಂಸದರು, ಶಾಸಕರು ಆದವರು ಖಾಸಗಿ ವೈದ್ಯಕೀಯ ಕಾಲೇಜು ಪ್ರಾರಂಭಿ ಸುತ್ತಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ವಿಷಯವನ್ನೇ ಅವರು ಮಾತನಾಡುವುದಿಲ್ಲ. ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನೂ ಖಾಸಗಿಯವರಿಗೆ ವಹಿಸಲು ಅವರು ವಕಾಲತ್ತು ವಹಿಸುತ್ತಾರೆ. ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಜನರ ತೆರಿಗೆ ಹಣ ವನ್ನು ಲೂಟಿ ಮಾಡುತ್ತಾರೆ. ಬೀಡಿ ಕಾರ್ಮಿಕರ ಹಿತರಕ್ಷಣೆ ಬಗ್ಗೆ ಮೌನಕ್ಕೆ ಶರಣಾಗುತ್ತಾರೆ. ಇಂತಹ ನಯವಂಚಕ ರಾಜಕಾರಣಿಗಳಿಗೆ ಮನೆಯ ದಾರಿ ತೋರುವುದಕ್ಕೆ ಈ ಚುನಾವಣೆ ವೇದಿಕೆಯಾಗಲಿ ಎಂದರು.

ಮಂಗಳೂರು ದಕ್ಷಿಣ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್‌ಕುಮಾರ್ ಬಜಾಲ್‌ ಮಾತನಾಡಿ, ‘17ನೇ ವಯ ಸ್ಸಿನಲ್ಲಿ ವಿದ್ಯಾರ್ಥಿ ಚಳವಳಿಯ ಮೂಲಕ ಸಾರ್ವಜನಿಕ ಪ್ರವೇಶ ಮಾಡಿದ್ದೆ. ಈವರೆಗೂ ಜನರ ಧ್ವನಿಯಾಗಿಯೇ ಕೆಲಸ ಮಾಡುತ್ತಿದ್ದೇನೆ. ಜನರು ಈ ಚುನಾವಣೆಯಲ್ಲಿ ನನಗಾಗಿ ಕೆಲಸ ಮಾಡಿ ದರೆ ಯಾವಾಗಲೂ ನಾನು ಜನರ ಕೆಲಸ ಮಾಡುವೆ’ ಎಂದು ಹೇಳಿದರು.

ಶೋಷಿತರು, ದಮನಿತರು, ಕಾರ್ಮಿ ಕರಿಗೆ ನ್ಯಾಯ ಒದಗಿಸುವುದಕ್ಕಾಗಿ ಸಿಪಿ ಎಂಗೆ ರಾಜಕೀಯ ಶಕ್ತಿ ತುಂಬಬೇಕು. ಮಂಗಳೂರಿನಲ್ಲಿ ಒಬ್ಬ ವ್ಯಕ್ತಿಯ ಗೆಲುವು ಮುಖ್ಯವಲ್ಲ, ಸಿಪಿಎಂ ಗೆಲುವು ಮುಖ್ಯ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಯಾವ ಮುನ್ನೋಟವೂ ಇಲ್ಲ. ಎಲ್ಲ ಜನ ರನ್ನೂ ಒಳಗೊಳ್ಳುವಂತಹ ಅಭಿವೃದ್ಧಿ ಮುನ್ನೋಟ ಹೊಂದಿರುವ ಸಿಪಿಎಂ ವಿಧಾನಸಭೆಯಲ್ಲೂ ಪ್ರಾತಿನಿಧ್ಯ ಪಡೆ ಯುವಂತಾಗಬೇಕು. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಸಮಾವೇಶ ಉದ್ಘಾಟಿಸಿದ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಮಂಡಳಿ ಕಾರ್ಯದರ್ಶಿ ಕೆ.ವಸಂತ ಆಚಾರಿ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಜನರ ಹಿತರಕ್ಷಣೆಯ ವಿಚಾರದಲ್ಲಿ ಎರಡೂ ಪಕ್ಷಗಳು ಸಮಾನವಾಗಿಯೇ ಕಾಣುತ್ತವೆ. ಪರ್ಯಾಯ ರಾಜಕಾರಣದ ಭಾಗವಾಗಿ ಸಿಪಿಎಂಗೆ ಶಕ್ತಿ ತುಂಬಲು ಬಡವರು, ಶೋಷಿತರು, ದಮನಿತರು ಒಗ್ಗೂಡಬೇಕು ಎಂದು ಹೇಳಿದರು.

ಸಿಪಿಎಂ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಸುರೇಶ್ ಬಜಾಲ್‌, ಜಯಂತಿ ಬಿ. ಶೆಟ್ಟಿ, ದಿನೇಶ್ ಶೆಟ್ಟಿ, ಜಯಪ್ರಕಾಶ್ ಶಕ್ತಿನಗರ, ಪ್ರದೀಪ್‌ ಕುಲಾಲ್‌, ಯಶವಂತ ಮರೋಳಿ, ಯೋಗೀಶ್ ಜೆಪ್ಪಿನಮೊಗರು, ಸಂತೋಷ್ ಬಜಾಲ್‌, ಸಂತೋಷ್ ಶಕ್ತಿನಗರ ಉಪಸ್ಥಿತರಿದ್ದರು.

ವಂತಿಗೆ ಸಂಗ್ರಹ

ಸುನೀಲ್‌ಕುಮಾರ್‌ ಬಜಾಲ್‌ ಅವರ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಸಮಾವೇಶದಲ್ಲಿ ವಂತಿಗೆ ಸಂಗ್ರಹಿಸಲಾಯಿತು. ಸಿಪಿಎಂ ಕಾರ್ಯಕರ್ತರು ಬಕೆಟ್‌ ಹಿಡಿದು ಬಂದಾಗ ನೂರಾರು ಮಂದಿ ಹಣ ನೀಡಿದರು. ಒಟ್ಟು ₹ 17,122 ವಂತಿಗೆ ಸಂಗ್ರಹವಾಗಿದೆ ಎಂದು ಸಿಪಿಎಂ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT