ಪರಮೇಶ್ವರ್‌ ನಗರ ಪ್ರದಕ್ಷಿಣೆ: ಶಿವಾಜಿ‌ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ

7

ಪರಮೇಶ್ವರ್‌ ನಗರ ಪ್ರದಕ್ಷಿಣೆ: ಶಿವಾಜಿ‌ನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ

Published:
Updated:

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶಿವಾಜಿ‌ನಗರ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದರು.

ಬೆಳಿಗ್ಗೆ 9.50ಕ್ಕೆ ಮೆಯೋಹಾಲ್‌ನಿಂದ ಹಲಸೂರು ಕೆರೆ, ಎಂ.ವಿ.ಬಡಾವಣೆ ಓಣಿಗಳಿಗೆ ಭೇಟಿ ನೀಡಿದರು. 

‘ಕುಸಿಯುವ ಹಂತದಲ್ಲಿದ್ದ ಮನೆಗಳ ನವೀಕರಣಕ್ಕೆ ನೆರವಾಗಬೇಕು. ಸಾಮೂಹಿಕ ಶೌಚಾಲಯ ಸರಿಪಡಿಸಬೇಕು. ಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಗಬ್ಬು ವಾಸನೆಯಿಂದಾಗಿ ಇಲ್ಲಿ ಜೀವಿಸಲು ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು’ ಎಂದು ನಿವಾಸಿಗಳು ಆಗ್ರಹಿಸಿದರು.

ಅಲ್ಲಲ್ಲಿ ಹಾರಾರ್ಪಣೆ, ಹೂಗುಚ್ಛ ಕೊಟ್ಟು ಸ್ವಾಗತಿಸುವುದು ನಡೆಯುತ್ತಲೇ ಇತ್ತು. ಹಲಸೂರು ವಾರ್ಡ್ 81ರ ಸಾರ್ವಜನಿಕ ಗ್ರಂಥಾಲಯ, ಜಿಮ್, ಶಿಶುವಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ಕೌಶಲ ತರಬೇತಿ ಕೇಂದ್ರಕ್ಕೆ ಮೂಲಸೌಲಭ್ಯ ಒದಗಿಸಬೇಕು. ಮೈದಾನ ಸಮತಟ್ಟುಗೊಳಿಸಿ ಕ್ರೀಡಾಕೂಟ ಏರ್ಪಡಿಸಲು ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಸಚಿವರ ತಂಡದಲ್ಲಿ ಬೆಂಬಲಿಗರು, ಕಾರ್ಯಕರ್ತರದ್ದೇ ಸಿಂಹಪಾಲು. ಭಾರೀ ಭದ್ರತೆಯೊಂದಿಗೆ ಪರಮೇಶ್ವರ್ ಅವರು ಬರುತ್ತಿದ್ದಂತೆಯೇ ಓಣಿಗಳ ಮಹಿಳೆಯರು, ಮಕ್ಕಳು ಕುತೂಹಲದಿಂದ ನೋಡಿದರು. 

ಶಿವಾಜಿ ನಗರದ ಚರ್ಚ್ ರಸ್ತೆಯಲ್ಲಿ ನಗರ ಪ್ರದಕ್ಷಿಣೆ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !