ಯಲಹಂಕ: ನೆಲ್ಲುಕುಂಟೆಯ ಗ್ರಾಮ ಠಾಣಾ ಜಾಗದ ಸರ್ವೆ ನಡೆಸಬೇಕೆಂದು ತಹಶೀಲ್ದಾರ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ವೆ ಕಾರ್ಯ ಪೂರ್ಣಗೊಂಡ ನಂತರ ಬಡವರಿಗೆ ನಿವೇಶನಗಳನ್ನು ಹಂಚಲು ಯೋಜನೆ ರೂಪಿಸಲಾಗಿದೆ ಎಂದು ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ನಾಗೇಶ್ ತಿಳಿಸಿದರು.
ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಮತ್ತು ರಾಜಕಾಲುವೆ ನಿರ್ಮಾಣ, ಕುದುರೆಗೆರೆ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ಸಮಸ್ಯೆ, ಬೆಟ್ಟಹಲಸೂರು ಕರೆಸುತ್ತ ನಡಿಗೆ ಪಥ, ಸಿ.ಟಿ.ಆರ್ ರಸ್ತೆಯ ಜೋಮಾಲಕುಂಟೆ ಬಳಿ ಉದ್ಯಾನ ನಿರ್ಮಾಣ ಕಾಮಗಾರಿಗಳು ಬಾಕಿಯಿವೆ. ಒಂದು ವರ್ಷದೊಳಗಾಗಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸವಲತ್ತುಗಳ ವಿತರಣೆ: ಫಲಾನುಭವಿಗಳಿಗೆ 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ಮತ್ತು ಇ-ಖಾತಾ, ಪಿಂಚಣಿ ಆದೇಶಪತ್ರ, ಭಾಗ್ಯಲಕ್ಷ್ಮಿ ಬಾಂಡ್ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ಉಪಾಧ್ಯಕ್ಷೆ ವಿಮಲಾ ಎಸ್.ಕೆ ಗಣೇಶ್, ಸದಸ್ಯರಾದ ಬಿ.ಆರ್.ಪ್ರವೀಣ್, ಟಿ.ಎಸ್.ನವೀನ್ ಕುಮಾರ್, ಪಿ.ಎಸ್.ರಮ್ಯ ವೇಣುಗೋಪಾಲ್, ಬಿ.ಎಸ್.ಮೋಹನ್ ಸಿದ್ದರಾಜು, ಪಿಡಿಒ ಕವಿತ.ಎಸ್, ಕಾರ್ಯದರ್ಶಿ ಎಂ.ಸುಬ್ರಮಣ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.