ಶನಿವಾರ, ಅಕ್ಟೋಬರ್ 24, 2020
24 °C

ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಮಾರಾಟ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೋದ್ಯೋಗ ಉಳಿಸಿ ಆಂದೋಲನದ ವತಿಯಿಂದ ಗಾಂಧಿ ಭವನದಲ್ಲಿ ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ, ಮಾರಾಟ ಗುರುವಾರ ಆರಂಭಗೊಂಡಿದ್ದು, ಅ. 4ವರೆಗೆ ನಡೆಯಲಿದೆ.

ಪ್ರದರ್ಶನ, ಮಾರಾಟದ ಜೊತೆಗೆ ಗಾಂಧಿಭವನದಲ್ಲಿ ಚರ್ಚಾಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೊಡು ಕೊಳ್ಳುವವರ ಸಮಾವೇಶ ಕೂಡ ನಡೆಯಲಿದೆ ಎಂದು ಗ್ರಾಮ ಸೇವಾ ಸಂಘ ತಿಳಿಸಿದೆ.

ಎರಡನೇ ಪ್ರದರ್ಶನ ಮಾರಾಟ ಕೆಂಗೇರಿ ಉಪನಗರದಲ್ಲಿರುವ ಹೊಯ್ಸಳ ವೃತ್ತದ ಬಳಿಯ ‘ಕರಸ್ಥಲ’ ಆವರಣದಲ್ಲಿ ಶುಕ್ರವಾರದಿಂದ (ಅ. 2) ಆರಂಭವಾಗಲಿದೆ. ಇಲ್ಲಿ ಪ್ರದರ್ಶನ ಮತ್ತು ಮಾರಾಟ ಕಾಯಂ ಇರಲಿದೆ. ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿರುವ ವಾರಾಂತ್ಯದ ಮಾರುಕಟ್ಟೆ ರಾಗಿಕಣ ಸಂತೆಯಲ್ಲಿ ಅ. 4ರಿಂದ ನಡೆಯಲಿದೆ. ಇದೇ ರೀತಿ ಪ್ರದರ್ಶನ, ಮಾರಾಟಗಳು ರಾಜ್ಯದಾದ್ಯಂತ ನಡೆಯಲಿದೆ ಎಂದೂ ಸಂಘ ತಿಳಿಸಿದೆ.

ಗಾಂಧಿ ಭವನದಲ್ಲಿ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅವರು ಇಟಗಿ ಭೀಮವನ ಕಿರುಚಿತ್ರ ಬಿಡುಗಡೆ ಮಾಡುವ ಮೂಲಕ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ದೇಸಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಮೈಮುನ, ಗ್ರಾಮ ಸೇವಾ ಸಂಘದ ಕಾರ್ಯದರ್ಶಿಗಳಾದ ಅಭಿಲಾಷ್.ಸಿ.ಎ. ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.