ಬೆಂಗಳೂರು: ಐದು ನಗರ ಪಾಲಿಕೆಗಳ 369 ವಾರ್ಡ್ಗಳ ಪುನರ್ ವಿಂಗಡಣೆಯ ಆಧಾರದಲ್ಲಿ 50 ವಿಭಾಗ ಹಾಗೂ 150 ಉಪ ವಿಭಾಗಗಳನ್ನು ರಚಿಸಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಆದೇಶಿಸಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ, ಪೂರ್ವ ನಗರ ಪಾಲಿಕೆ, ಪಶ್ಚಿಮ ನಗರ ಪಾಲಿಕೆ, ಉತ್ತರ ನಗರ ಪಾಲಿಕೆ, ದಕ್ಷಿಣ ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ವಾರ್ಡ್ಗಳ ಪುನರ್ ವಿಂಗಡಣೆಯಾಗಿದೆ. ಆಡಳಿತಾತ್ಮಕ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ವಿಭಾಗ, ಉಪ ವಿಭಾಗಗಳನ್ನು ರಚಿಸಲಾಗಿದೆ.

ಆನ್ಲೈನ್ನಲ್ಲೇ ಇ–ಖಾತಾ: ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಯನ್ನು ಸರಳವಾದ ಆನ್ಲೈನ್ ಪ್ರಕ್ರಿಯೆಯಲ್ಲಿ ನಡೆಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಸ್ಥಳೀಯ ಖಾಸಗಿ ಉದ್ಯಮಿಗಳ ಮೂಲಕ ಇ-ಖಾತಾ ಸೇವೆಗಳ ಕುರಿತ ಮಾಹಿತಿ ನೀಡಿದ ಅವರು, ಇ-ಖಾತಾ ಅರ್ಜಿಗಳನ್ನು ಆನ್ಲೈನ್ ಮೂಲಕ ತಪ್ಪಿಲ್ಲದಂತೆ ಸಲ್ಲಿಸಲು ಹಾಗೂ ನಾಗರಿಕರಿಗೆ ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿದರು. ನಾಗರಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಅರ್ಜಿಗಳು ನಿಖರವಾಗಿ ಸಲ್ಲಿಕೆಯಾಗುವಂತೆ ಸಹಕರಿಸುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು.

ಇ-ಖಾತಾ ಸಂಬಂಧಿತ ವಿಷಯಗಳಿಗೆ ನಾಗರಿಕರು ಅಥವಾ ಎಲ್ಪಿಇಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಇ-ಖಾತಾ ವಿತರಣೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿಕೊಳ್ಳುವಂತೆ ಸೂಚಿಸಲಾಯಿತು. ಸರಾಸರಿ ಮೂರರಿಂದ ನಾಲ್ಕು ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ತಿಳಿಸಿದರು.

ಮಾಹಿತಿ ತಂತಜ್ಞಾನದ (ಇ-ಆಸ್ತಿ) ಉಪ ಆಯುಕ್ತ ಮದನ್ ಮೋಹನ್ ಸಿ, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮೀದೇವಿ ಉಪಸ್ಥಿತರಿದ್ದರು.

ಸ್ವಚ್ಛತಾ ವಿಶೇಷ ಅಭಿಯಾನ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಸಾಮೂಹಿಕ ಸ್ವಚ್ಛತೆ ಕಾರ್ಯದಿಂದ ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ ಹಾಗೂ ಪಾದಚಾರಿ ಒತ್ತುವರಿ ತಡೆಗಟ್ಟಲು ಸಾಧ್ಯವಾಗಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.

144 ಪೌರಕಾರ್ಮಿಕರು ಸಾಮೂಹಿಕ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದು, ಒಟ್ಟು 8.45 ಕಿಲೋಮೀಟರ್ ಸ್ವಚ್ಛಗೊಳಿಸಲಾಗಿದೆ. 6 ಜೆಸಿಬಿ, 31 ಟ್ರ್ಯಾಕ್ಟರ್ಗಳ ಬಳಕೆಯೊಂದಿಗೆ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ 41 ಲೋಡ್ ತ್ಯಾಜ್ಯ ಹಾಗೂ 10 ಬ್ಲ್ಯಾಕ್ ಸ್ಪಾಟ್ ತೆರವುಗೊಳಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.