ಬೆಂಗಳೂರು: ಅನುದಾನವನ್ನು ನೇರವಾಗಿ ಖರ್ಚು ಮಾಡುವ ಅಧಿಕಾರವನ್ನು ಹೊಂದಿಲ್ಲದ ಜಿಬಿಎ ಬಜೆಟ್ಗೆ, ಐದು ನಗರ ಪಾಲಿಕೆಗಳ ಬಜೆಟ್ ಮಂಡನೆಗಿಂತ ಒಂದು ವಾರ ಮೊದಲೇ ನಡೆದಿದ್ದ ಜಿಬಿಎ ಕಾರ್ಯಕಾರಿ ಸಮಿತಿಯ ಮೊದಲನೆ ಸಭೆ ಅನುಮೋದನೆ ನೀಡಿದೆ. ಈ ಬಜೆಟ್ಗೆ ಜಿಬಿಎ ಆಡಳಿತ ಮಂಡಳಿ ಸಭೆಯ ಅನುಮೋದನೆ ಅಗತ್ಯವಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜಿಬಿಎ ಆಡಳಿತ ಮಂಡಳಿಯ ಮೊದಲ ಸಭೆ 2025ರ ಅಕ್ಟೋಬರ್ 10ರಂದು ನಡೆದಿತ್ತು. ನಂತರ, ಮೂರು ತಿಂಗಳಿಗೊಮ್ಮೆ ನಡೆಯಬೇಕಾಗಿದ್ದ ಸಭೆ ಆರು ತಿಂಗಳಾದರೂ ನಡೆದಿಲ್ಲ. ಇದೀಗ ಆರ್ಥಿಕ ವರ್ಷ ಮುಗಿದಿರುವುದರಿಂದ, ಜಿಬಿಎ ಕಾರ್ಯಕಾರಿ ಸಮಿತಿ ಅನುಮೋದಿಸಿರುವ ಬಜೆಟ್ಗೆ ಮಾನ್ಯತೆ ಇದೆಯೇ, ಇಲ್ಲವೇ ಎಂಬ ಸಂಶಯ ವ್ಯಕ್ತವಾಗಿದೆ.

ಜಿಬಿಎ ಆಡಳಿತ ಮಂಡಳಿಯ ಸಭೆಯ ಅನುಮೋದನೆ ಇಲ್ಲದೆ, ಜಿಬಿಎ ಹೇಗೆ ಹಣ ವೆಚ್ಚ ಮಾಡುತ್ತದೆ, ಸಿಬ್ಬಂದಿಗೆ ಹೇಗೆ ವೇತನ ಪಾವತಿ ಮಾಡುತ್ತದೆ ಎಂಬುದು ಅಧಿಕಾರಿಗಳಲ್ಲೇ ಗೊಂದಲ ಮೂಡಿದೆ.

ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿರುವ ಜಿಬಿಎ ಕಾರ್ಯಕಾರಿ ಸಮಿತಿ ಮೊದಲ ಸಭೆ, ಮಾರ್ಚ್ 20ರಂದು ನಡೆದಿದ್ದು, 2026–27ನೇ ಸಾಲಿನ ₹1,767.91 ಕೋಟಿ ಗಾತ್ರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಬಜೆಟ್ಗೆ ಅನುಮೋದನೆ ದೊರೆತಿದೆ. ಈ ಬಜೆಟ್ ಅನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಂಡಳಿ ಸಭೆಯ ಮುಂದೆಯೂ ಮಂಡಿಸಿ ಅನುಮೋದನೆ ಪಡೆಯಬೇಕು ಎಂದೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಿಳಿಸಲಾಗಿದೆ.

ವೇತನ ಭತ್ಯೆ ಹಾಗೂ ಕಚೇರಿ ವೆಚ್ಚಗಳನ್ನು ಹೊರತುಪಡಿಸಿ ಉಳಿದ ಲೆಕ್ಕ ಶೀರ್ಷಿಕೆಗಳಲ್ಲಿ ಅನುದಾನವನ್ನು ನೇರವಾಗಿ ವೆಚ್ಚ ಮಾಡುವ ಅಧಿಕಾರ ಜಿಬಿಎ ಅಧಿಕಾರಿಗಳಿಗೆ ಇಲ್ಲ. ಇಲಾಖಾ ಮುಖ್ಯಸ್ಥರು ಉಳಿದ ಎಲ್ಲ ಕಾಮಗಾರಿಗಳು, ಇತರೆ ವೆಚ್ಚಗಳಿಗೆ ಮುಖ್ಯ ಆಯುಕ್ತರು, ಕಾರ್ಯಕಾರಿ ಸಮಿತಿ ಅಥವಾ ಪ್ರಾಧಿಕಾರದ ಸಭೆಯ ನಿರ್ದಿಷ್ಟ ಮಂಜೂರಾತಿ ಪಡೆದ ನಂತರವೇ ವೆಚ್ಚಗಳನ್ನು ಭರಿಸಬೇಕು. ಇಲಾಖಾವರು, ಲೆಕ್ಕ ಶೀರ್ಷಿಕೆವಾರು ಬಿಲ್ಗಳ ಜ್ಯೇಷ್ಠತೆ ಆಧಾರದಲ್ಲಿ ಪಾವತಿಸಬೇಕು. ಬಟವಾಡೆ ಅಧಿಕಾರಿಗಳು ವೆಚ್ಚವನ್ನು ಭರಿಸುವ ಮುನ್ನ ಎಲ್ಲ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂಬ ವಿಶೇಷ ಸೂಚನೆ ಮೇರೆಗೆ ಬಜೆಟ್ಗೆ ಸಮ್ಮತಿಸಲಾಗಿದೆ.

ಬಿಬಿಎಂಪಿ ಬ್ಯಾಂಕ್ ಖಾತೆಗಳು ಹಾಗೂ ರಾಜ್ಯ ಸರ್ಕಾರದ ಅನುದಾನಗಳು ಜಿಬಿಎ ಖಾತೆಯಲ್ಲೇ 2025–26ನೇ ಸಾಲಿನಲ್ಲಿ ಜಮೆ ಆಗುತ್ತಿದ್ದವು. ಹೀಗಾಗಿ, ₹389 ಕೋಟಿಗಳ ಪ್ರಾರಂಭಿಕ ಹಣದಿಂದ ಜಿಬಿಎ ಆಯವ್ಯಯ ಆರಂಭವಾಗಿದೆ. ಬ್ಯಾಂಕ್ ಠೇವಣಿಯಿಂದಲೇ ₹4.75 ಕೋಟಿ ಲಭ್ಯವಾಗಲಿದ್ದು, ಮೇಲ್ವಿಚಾರಣೆ ಶುಲ್ಕವಾಗಿ ₹5 ಕೋಟಿ, ನಗರ ಯೋಜನೆಯಲ್ಲಿ ಮೇಲ್ವಿಚಾರಣೆ ಶುಲ್ಕವಾಗಿ ₹10 ಕೋಟಿ, ಕಟ್ಟಡ ನಿರ್ಮಾಣ ಅಭಿವೃದ್ಧಿ ಶುಲ್ಕ ₹17 ಕೋಟಿ, ಕೆರೆಗಳ ಪುನರುಜ್ಜೀವನ ಶುಲ್ಕ ₹2.65 ಕೋಟಿ ಹಾಗೂ ಇತರೆ ಆದಾಯವಾಗಿ ₹5 ಕೋಟಿ ಸ್ವೀಕೃತಿಯಾಗಲಿದೆ.

ವಿಪತ್ತು ಪರಿಹಾರ, ವಿಶ್ವಬ್ಯಾಂಕ್ನಿಂದ ₹738 ಕೋಟಿ

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು ಕಳೆದ ಸಾಲಿನಲ್ಲಿ ಶೂನ್ಯವಾಗಿರಿಸಿದ್ದ ಜಿಬಿಎ, ಈ ಸಾಲಿನಲ್ಲಿ ₹238.50 ಕೋಟಿ ನಿರೀಕ್ಷಿಸಿದೆ. ವಿಶ್ವಬ್ಯಾಂಕ್ ನೆರವಿನ ಯೋಜನೆಗೆ ₹500 ಕೋಟಿಯನ್ನು ನೇರವಾಗಿ ಪಡೆಯಲಿದೆ.

ವೇತನ, ಕಚೇರಿ ವೆಚ್ಚ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ₹30 ಕೋಟಿ ಪಡೆಯಲಿರುವ ಜಿಬಿಎಗೆ, ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯ ಪಾವತಿಗೆ ಐದು ನಗರ ಪಾಲಿಕೆಗಳಿಂದ ₹375 ಕೋಟಿ ಅನುದಾನ ಲಭ್ಯವಾಗಲಿದೆ. ಬ್ರಾಂಡ್ ಬೆಂಗಳೂರು– ಆರೋಗ್ಯ ಬೆಂಗಳೂರಿಗೆ ಐದು ನಗರ ಪಾಲಿಕೆಗಳಿಂದ ₹175 ಕೋಟಿ ಅನುದಾನ ಪಡೆಯಲಿದೆ.

ನೀರು ಸರಬರಾಜು ಯೋಜನೆ, ಅಭಿವೃದ್ಧಿ ಸರ್ಚಾರ್ಜ್ನಿಂದ ₹1.82 ಕೋಟಿ, ಹೊರ ವರ್ತುಲ ರಸ್ತೆಯ ನಿರ್ಮಾಣ ಅಭಿವೃದ್ಧಿ ಸರ್ಚಾರ್ಜ್ ₹2.14 ಕೋಟಿ, ಕೊಳೆಗೇರಿ ಸುಧಾರಣೆ– ಅಭಿವೃದ್ಧಿ ಸರ್ಚಾರ್ಜ್ ₹91 ಲಕ್ಷ, ತ್ವರಿತ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಸರ್ಚಾರ್ಜ್ ₹10.74 ಕೋಟಿ ಸ್ವೀಕೃತಿಯಾಗಲಿದೆ.

ಕಾರ್ಯಕಾರಿ ಸಮಿತಿ ಸಮ್ಮತಿಸಿದ ವಿಷಯಗಳು

* ಉತ್ತರ– ದಕ್ಷಿಣ ಸುರಂಗ ರಸ್ತೆಯ ₹17780 ಕೋಟಿ ಯೋಜನೆಯ ಆರ್ಥಿಕ ಬಿಡ್ ಅನ್ನು ತಜ್ಞರ ಸಮಿತಿ ಮೌಲ್ಯಮಾಪನ ಮಾಡುತ್ತಿದೆ. ಪೂರ್ವ–ಪಶ್ಚಿಮ ಸುರಂಗ ರಸ್ತೆಯ ₹20 ಸಾವಿರ ಕೋಟಿಯ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಬೇಕು.

* 13 ಎಲಿವೇಟೆಡ್ ಕಾಮಗಾರಿಗಳನ್ನು ₹11801.08 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು ಇದರಲ್ಲಿ ಭೂಸ್ವಾಧೀನಕ್ಕೆ ಐದು ನಗರ ಪಾಲಿಕೆಗಳಿಂದ ₹4072.27 ಕೋಟಿ ಪಡೆಯಬೇಕು. ಬಾಕಿ ಮೊತ್ತ ₹7728.5 ಕೋಟಿಯನ್ನು ಸರ್ಕಾರದ ಅನುದಾನದಲ್ಲಿ ಬಳಸಿಕೊಳ್ಳಬೇಕು.

* ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ 44 ಕಿ.ಮೀ ಉದ್ದದ ಹೆಣ್ಣೂರು– ನಾಗವಾರ ಎಲಿವೇಟೆಡ್ ಯೋಜನೆಯ ಪ್ರಸ್ತಾವವನ್ನು ಪ್ರತ್ಯೇಕವಾಗಿ ಸರ್ಕಾರಕ್ಕೆ ಸಲ್ಲಿಸಬೇಕು.

* ರಾಜಕಾಲುವೆ ಬಫರ್ ರಸ್ತೆಗಳನ್ನು ನಗರ ಅಭಿವೃದ್ಧಿ ಯೋಜನೆಯ (ಸಿಡಿಪಿ) ಭಾಗವಾಗಿ ಸೇರಿಸಿಕೊಂಡು ಇವುಗಳನ್ನು ಮುಖ್ಯ ರಸ್ತೆ/ ಸಿಡಿಪಿ ರಸ್ತೆ ಎಂದು ಪರಿವರ್ತಿಸಲು ತೀರ್ಮಾನಿಸಲಾಯಿತು. ಈ ರಸ್ತೆಗಳಿಗಾಗಿ ಸುತ್ತಮುತ್ತಲಿನ ಆಸ್ತಿಗಳಿಗೆ ಮೂರನೇ ಒಂದು ಭಾಗ ಅಭಿವೃದ್ಧಿ ಶುಲ್ಕ ವಿಧಿಸುವುದಕ್ಕಾಗಿ ನಿಯಮ ರೂಪಿಸಲು ನಿರ್ಧರಿಸಲಾಯಿತು.

* ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಗ್ನಿಶಾಮಕ ಘಟಕಗಳಿಗೆ ನಾಗರಿಕ ಸೌಲಭ್ಯ (ಸಿಎ) ನಿವೇಶನಗಳನ್ನು ಹಸ್ತಾಂತರಿಸಲು ಬಿಡಿಎ ಆಯುಕ್ತರ ಸಮ್ಮತಿ.

* ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ‘ಮಾಸ್ಟರ್ ಪ್ಲಾನ್’ ತಯಾರಿಸಲು ವೇಳಾಪಟ್ಟಿ ನಿಗದಿ. 2026ರ ಫೆಬ್ರುವರಿ 16ರಂದು ಕಾರ್ಯಾದೇಶ ನೀಡಿ 2027ರ ಮಾರ್ಚ್ 15ಕ್ಕೆ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು.

* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿಧಿಸಲಾಗುತ್ತಿದ್ದ ವಿವಿಧ ಭೂ ಅಭಿವೃದ್ಧಿ ಮಂಜೂರಾತಿ ಶುಲ್ಕಗಳನ್ನು ಯಥಾವತ್ತಾಗಿ ಜಿಬಿಎ ವ್ಯಾಪ್ತಿಯಲ್ಲಿ ವಿಧಿಸಲು ನಿರ್ಧರಿಸಲಾಯಿತು.

* ಆನ್ಲೈನ್ ತಂತ್ರಾಂಶದಲ್ಲಿ ಖಾಸಗಿ ಆರ್ಕಿಟೆಕ್ಟ್ ಎಂಜಿನಿಯರ್ ಸ್ಟ್ರಕ್ಚರಲ್ ಎಂಜಿನಿಯರ್ ಸೂಪರ್ವೈಸರ್ಗಳ ನೋಂದಣಿ ನವೀಕರಿಸಿ ಪ್ರಕ್ರಿಯೆಯನ್ನು ಕೇಂದ್ರೀಕೃತಗೊಳಿಸಿ ಜಿಬಿಎ ನಗರ ಯೋಜನಾ ಶಾಖೆಯ ಜಂಟಿ ನಿರ್ದೇಶಕರಿಗೆ ಅಧಿಕಾರ ಪ್ರತ್ಯಾಯೋಜಿಸಲಾಯಿತು.

* ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಗ್ನಿಶಾಮಕ ಘಟಕಗಳನ್ನು ಪುನರ್ ರಚಿಸುವುದು ಹೊಸದಾಗಿ ಅಗ್ನಿಶಾಮಕ ಘಟಕಗಳನ್ನು ಸ್ಥಾಪಿಸಲು ಜಾಗ ನೀಡಲು ನಿರ್ಧರಿಸಲಾಯಿತು.

* ಬಿಬಿಎಂಪಿ ಬಜೆಟ್ನಲ್ಲಿ ಮೀಸಲಿರಿಸಿದ್ದ ₹28 ಕೋಟಿಯನ್ನು ಹವಾಮಾನ ವೈಪರೀತ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಪೂರಕ ಕಾಮಗಾರಿಗಳಿಗಾಗಿ ಹಮಾಮಾನ ಕ್ರಿಯಾಕೋಶದಿಂದ ಕೈಗೊಳ್ಳುವ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.

* ಐದು ನಗರ ಪಾಲಿಕೆಗಳ ವಲಯಗಳಲ್ಲಿ ‘10 ಜಿಬಿಎ ಗ್ಯಾರಂಟಿ ಸೇವಾ ಕೇಂದ್ರ’ಗಳನ್ನು ಬೂಟ್ ಮಾದರಿಯಲ್ಲಿ ಸ್ಥಾಪಿಸಿ ನಾಗರಿಕರಿಂದ ಸೇವಾ ಶುಲ್ಕ ಭರಿಸಿಕೊಳ್ಳಲು ಅನುಮೋದನೆ ನೀಡಲಾಯಿತು.

*ಪಾದಚಾರಿ ಮಾರ್ಗ ಉದ್ಯಾನ ಕೆರೆಗಳ ಸುತ್ತಲಿನ ಪ್ರದೇಶ ಮೇಲ್ಸೇತುವೆ ಕೆಳಭಾಗ ಜಂಕ್ಷನ್ಗಳನ್ನು ಸಮರ್ಥವಾಗಿ ವಿನ್ಯಾಸಗೊಳಿಸಲು ಜಿಬಿಎ ಮತ್ತು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ನಗರ ವಿನ್ಯಾಸ ಕೋಶ’ ಸ್ಥಾಪಿಸಲು ಅನುಮೋದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.