ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಇಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ಗಳಿಗೆ ಮೀಸಲಾತಿಯನ್ನು ಅಂತಿಮಗೊಳಿಸಿ ಶನಿವಾರ ತಡರಾತ್ರಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಮಹಿಳಾ ಮೀಸಲಾತಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ (ಜಿಬಿಜಿಎ) ಶೇ 50ರಷ್ಟನ್ನು ಪಾಲಿಸಿಲ್ಲ.

ಐದು ನಗರ ಪಾಲಿಕೆಗಳ ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸುಪ್ರೀಂ ಕೋರ್ಟ್ ಸೂ಼ಚನೆಯಂತೆ ಜೂನ್ ಅಂತ್ಯದೊಳಗೆ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳುತ್ತಲೇ ಇದೆ. ಆದರೆ, ವಾರ್ಡ್ ಮೀಸಲಾತಿಯಲ್ಲಿ ಮೇಲ್ನೋಟಕ್ಕೆ ತಪ್ಪಾಗಿರುವುದು ಕರಡು ಅಧಿಸೂಚನೆಯಲ್ಲೇ ಕಂಡು ಬಂದಿತ್ತು. ಅದರಲ್ಲಿ ಯಾವುದೇ ಬದಲಾವಣೆ ಮಾಡದೆ ಅಂತಿಮ ಅಧಿಸೂಚನೆ ಪ್ರಕಟಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಐದು ನಗರ ಪಾಲಿಕೆಗಳ ಒಟ್ಟು ವಾರ್ಡ್ಗಳ ಸಂಖ್ಯೆ 369. ಇದರಲ್ಲಿ ಶೇ 50ರಷ್ಟು ಎಂದರೆ, 184.5. ಅರ್ಧ ವಾರ್ಡ್ ಅನ್ನು ನೀಡಲು ಸಾಧ್ಯವಿಲ್ಲ. ಆದರೆ, 184 ವಾರ್ಡ್ಗಳನ್ನು ಮಹಿಳೆಯರಿಗೆ ಮೀಸಲಿಡಬಹುದಾಗಿತ್ತು. 176 ವಾರ್ಡ್ಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಟ್ಟು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ವಾರ್ಡ್ವಾರು ಮೀಸಲಾತಿಯ ಕರಡು ಹಾಗೂ ಅಂತಿಮ ಅಧಿಸೂಚನೆಯಲ್ಲಿ ಮಹಿಳೆಯರಿಗೆ ಅದೇ ಸಂಖ್ಯೆ ವಾರ್ಡ್ಗಳು ಮೀಸಲಾಗಿವೆ. ಮಹಿಳೆಯರ ಮೀಸಲಾತಿಯಷ್ಟೇ ಅಲ್ಲ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎ ಹಾಗೂ ಬಿ, ಸಾಮಾನ್ಯ ವರ್ಗದ ವಾರ್ಡ್ಗಳ ಮೀಸಲಾತಿಯ ಕರಡು ಹಾಗೂ ಅಂತಿಮ ಅಧಿಸೂಚನೆಗೂ ಯಾವುದೇ ವ್ಯತ್ಯಾಸವಿಲ್ಲ.

ಮಹಿಳಾ ಮೀಸಲಾತಿ ನೀಡುವಾಗ ಐದು ನಗರ ಪಾಲಿಕೆಗಳಿಗೆ ಒಟ್ಟಾರೆ ಶೇ 50ರಷ್ಟು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಒಪ್ಪಬಹುದಾದರೂ, ಆಯಾ ನಗರ ಪಾಲಿಕೆಗಳಲ್ಲೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಕ್ಕಿಲ್ಲ ಎಂದು ಅಂಕಿ–ಅಂಶಗಳೇ ಹೇಳುತ್ತವೆ. ಕೇಂದ್ರ ನಗರ ಪಾಲಿಕೆಯಲ್ಲಿ ಮೂರು ಹಾಗೂ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಗರ ಪಾಲಿಕೆಗಳಲ್ಲಿ ತಲಾ ಎರಡು ವಾರ್ಡ್ಗಳಲ್ಲಿ ಮಹಿಳಾ ಮೀಸಲಾತಿ ಕಡಿಮೆಯಾಗಿದೆ. ಇದಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಬೇಕಾದ ವಾರ್ಡ್ಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದುಳಿದ ವರ್ಗದಲ್ಲೂ ಅವರಿಗೆ ನಿಗದಿಯಾಗಿರುವ ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.

‘ಕರಡು ವಾರ್ಡ್ ಮೀಸಲಾತಿಯಲ್ಲಿ ಸಾಕಷ್ಟು ಸಮಸ್ಯೆ ಇದೆ ಎಂದು ನಾವೆಲ್ಲ ಹೇಳಿದ್ದೆವು. ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ (ಜಿಬಿಜಿಎ) ವಿರುದ್ಧವಾಗಿಯೇ ಮೀಸಲಾತಿ ಕರಡು ಹೊರಬಂದಿದೆ. ಇದು ಚುನಾವಣೆಗೆ ಅಡ್ಡಿಯಾಗಬಹುದು’ ಎಂಬ ಆಂತಕವನ್ನೂ ವ್ಯಕ್ತಪಡಿಸಿದ್ದೆವು. ಮಹಿಳಾ ಮೀಸಲಾತಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಇರುವುದನ್ನು ನಮ್ಮ ನಾಯಕರ ಗಮನಕ್ಕೆ ತಂದಿದ್ದೆವು. ಆದರೆ, ಅದ್ಯಾವುದನ್ನೂ ಪರಿಗಣಿಸದೆ, ಕರಡು ಅಧಿಸೂಚನೆಯಂತೆಯೇ ಅಂತಿಮ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ನ್ಯಾಯಾಲಯಕ್ಕೆ ಹೋದರೆ, ಚುನಾವಣೆಗೂ ತಡೆ ಸಿಗಬಹುದು. ಇದನ್ನೇ ನಮ್ಮ ನಾಯಕರು, ಶಾಸಕರು ಬಯಸುತ್ತಿದ್ದಾರೆʼ ಎಂದೂ ಕಾಂಗ್ರೆಸ್, ಬಿಜೆಪಿಯ ಸ್ಥಳೀಯ ಮುಖಂಡರು ಹೇಳಿದರು.

ʼ2026ರ ಏಪ್ರಿಲ್ನಲ್ಲಿ ದೇಶದಲ್ಲಿ ಜನಗಣತಿ ಆರಂಭವಾಗುತ್ತಿರುವುದರಿಂದ, ನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಗೆ ತೊಡಕಾಗಲಿದೆ. ನಗರ ಪಾಲಿಕೆ ಚುನಾವಣೆಯ ಸಿದ್ಧತೆಯಲ್ಲಿರುವವರೇ ಏಪ್ರಿಲ್ನಿಂದ ಒಂದೂವರೆ ತಿಂಗಳು ಜನಗಣತಿ ಕಾರ್ಯಕ್ಕೆ ನಿಯೋಜನೆಯಾಗುವುದರಿಂದ ಮತದಾರರ ಪಟ್ಟಿ ಹಾಗೂ ಇತರೆ ಕಾರ್ಯಗಳು ಸ್ಥಗಿತವಾಗಲಿವೆ. ಇನ್ನು 2011ರ ಜನಗಣತಿಯಂತೆ ನಗರ ಪಾಲಿಕೆ ಚುನಾವಣೆಯನ್ನು ನಡೆಸಲಾಗುತ್ತಿದ್ದು, ಇನ್ನು ಆರು ತಿಂಗಳು ಕಳೆದರೆ ಹೊಸ ಜನಗಣತಿಯ ಅಂಕಿ-ಅಂಶಗಳೇ ಬರುತ್ತವೆ. ಅದರಂತೆ ಚುನಾವಣೆ ಮಾಡಿದರೆ ಮೀಸಲಾತಿಯಲ್ಲಿ ನ್ಯಾಯ ಸಿಗುತ್ತದೆ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಬಹುದಾಗಿದೆ. ಹೀಗಾಗಿ, ನಗರ ಪಾಲಿಕೆಗಳ ಚುನಾವಣೆ ನಮಗೆಲ್ಲ ಇನ್ನೂ ಕನಸೇʼ ಎಂಬುದು ಕಾರ್ಪೊರೇಟರ್ಗಳಾಗುವ ಆಕಾಂಕ್ಷೆ ಹೊಂದಿರುವ ಪ್ರಮುಖ ಮೂರೂ ಪಕ್ಷಗಳ ಮುಖಂಡರ ಮಾತು.

ಅಂತಿಮವಾಗದ ಮತದಾರರ ಪಟ್ಟಿ

ಐದು ನಗರ ಪಾಲಿಕೆಗಳ ಮತದಾರರ ಪಟ್ಟಿ ಅಂತಿಮವಾಗಿ ಪ್ರಕಟವಾದ ನಂತರದ ಒಂದೂವರೆ ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿ ಹೇಳುತ್ತಿದ್ದಾರೆ. 2026ರ ಜನವರಿಯಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಆದರೆ, ಮತದಾರರ ಕರಡು ಪಟ್ಟಿಯನ್ನು ಜನವರಿ 19ರಂದು ಪ್ರಕಟಿಸಲಾಗಿದೆ. ಇದರಲ್ಲೂ ಸಾಕಷ್ಟು ಸಮಸ್ಯೆಗಳಾಗಿದ್ದು, ಮತದಾರರ ಪರಿಷ್ಕೃತ ಕರಡು ಪಟ್ಟಿಯನ್ನು ಮಾರ್ಚ್ 9ರಂದು ಪ್ರಕಟಿಸಲಿದೆ. ನಂತರ, ಆಕ್ಷೇಪಗಳನ್ನೆಲ್ಲ ಪರಿಶೀಲಿಸಿ, ಏಪ್ರಿಲ್ 6ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಾಗಿ ಹೇಳಿದೆ.

ಮಹಿಳೆಯರಿಗೆ ಅನ್ಯಾಯ: ಪದ್ಮನಾಭರೆಡ್ಡಿ

ವಿಶ್ವ ಮಹಿಳಾ ದಿನಾಚರಣೆಯ ಹಿಂದಿನ ದಿನ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ಪ್ರಕಟಿಸಿರುವ ರಾಜ್ಯ ಸರ್ಕಾರ, ಮಹಿಳೆಯರ ರಾಜಕೀಯ ಹಕ್ಕನ್ನು ಕಸಿದುಕೊಂಡಿದೆ. ಕಾಯ್ದೆ ಪ್ರಕಾರ ಸಿಗಬೇಕಾದ ಎಂಟು ಸ್ಥಾನಗಳನ್ನು ಮಹಿಳೆಯರಿಂದ ಕಸಿದುಕೊಂಡು ಅನ್ಯಾಯ ಮಾಡಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಆಶಯದಂತೆ ಮಹಿಳೆಯರಿಗೆ ಶೇ 50ರಷ್ಟು ಅಧಿಕಾರ ನೀಡುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರ, ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ವಂಚನೆ ಮಾಡಿದೆ’ ಎಂದು ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ, ಬಿಜೆಪಿಯ ಪದ್ಮನಾಭರೆಡ್ಡಿ ದೂರಿದರು.

‘ಜಿಬಿಜಿಎಯ ಪ್ರಕರಣ 29ರ ಅಂಶ ನಾಲ್ಕರ ಪ್ರಕಾರ, ಎಲ್ಲ ವರ್ಗಗಳಲ್ಲೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿ, ನಗರ ಪಾಲಿಕೆಗಳಿಗೆ ನೇರವಾಗಿ ಆಯ್ಕೆಯಾಗಬೇಕು’ ಎಂದು ಹೇಳಲಾಗಿದೆ. ಆದರೆ, ಅದನ್ನು ಮೀರಿ ಮೀಸಲಾತಿ ಕರಡು ಹೊರಡಿಸಲಾಗಿತ್ತು, ಅದನ್ನೇ ಅಂತಿಮ ಅಧಿಸೂಚನೆಯಲ್ಲೂ ಪ್ರಕಟಿಸಲಾಗಿದೆ. ‘ಬಿಬಿಎಂಪಿಯ 198 ವಾರ್ಡ್ಗಳಲ್ಲಿ 99 ವಾರ್ಡ್ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇತ್ತು. ಅಲ್ಲದೆ, ಸಾಮಾನ್ಯ ವಾರ್ಡ್ಗಳಲ್ಲೂ ಮಹಿಳೆಯರು ಗೆಲುವು ಸಾಧಿಸಿದ್ದರು’ ಎಂದು ತಿಳಿಸಿದರು.

ಹೈಕೋರ್ಟ್ ಸೂಚನೆಯನ್ನೂ ಪಾಲಿಸದೆ, ವಾರ್ಡ್ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದರೆ ಅಲ್ಲಿ ಮೀಸಲಾತಿ ನೀಡಬೇಕೆಂಬ ಉದ್ದೇಶವನ್ನೂ ಗಾಳಿಗೆ ತೂರಲಾಗಿದೆ. ನಗರ ಪಾಲಿಕೆಗಳ ಚುನಾವಣೆ ನಡೆಸಲು ಸರ್ಕಾರಕ್ಕೆ ಇಚ್ಛೆ ಇಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ತಡೆಯಾಗಲಿ ಎಂದೇ ಇಂತಹ ತಪ್ಪುಗಳನ್ನು ಉದ್ದೇಶಪೂರ್ವಕವಾಗಿದೆ ಮಾಡುತ್ತಿದೆ ಎಂದರು.

ಬೆಂಗಳೂರು ಉತ್ತರ ನಗರ ಪಾಲಿಕೆ 72 ವಾರ್ಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.