ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ದಕ್ಷಿಣ ನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ಶನಿವಾರ ಮಂಡಿಸಲಾಯಿತು.

ಬನಶಂಕರಿ ದೇವಸ್ಥಾನದ ಹತ್ತಿರವಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚೊಚ್ಚಲ ಆಯವ್ಯಯವನ್ನು ಆಯುಕ್ತರಾದ ಕೆ.ಎನ್ ರಮೇಶ್ ರವರು ಪ್ರಸ್ತುತ ಪಡಿಸಿದರು.

2026-27ನೇ ವರ್ಷದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3826.43 ಕೋಟಿಗಳಷ್ಟು ಇದ್ದು, ಒಟ್ಟು ಖರ್ಚು ರೂ: 3825.95 ಕೋಟಿ ರೂ. ಇರಲಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಮಾನ್ಯ ಆಡಳಿತಗಾರರಾದ ಶ್ರೀ ಮಹೇಶ್ವರ್ ರಾವ್ ರವರ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆ ನಡೆಯಿತು.

ಅಭಿವೃದ್ಧಿ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ಕಂದಾಯ ಅಪರ ಆಯುಕ್ತರಾದ ರಾಚಪ್ಪ, ಜಂಟಿ ಆಯುಕ್ತರಾದ ಮಧು ಪಟೇಲ್, ಸತೀಶ್ ಬಾಬು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ರವಿ, ಹಣಕಾಸು ವಿಭಾಗದ ಉಪ ನಿಯಂತ್ರಕರಾದ ಚೇತನ್ ಸೇರಿದಂತೆ ಹಲವರು ಉಪಸಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.