ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಟ್‌ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ

Last Updated 11 ಫೆಬ್ರುವರಿ 2018, 20:25 IST
ಅಕ್ಷರ ಗಾತ್ರ

ನೆಲಮಂಗಲ: ಪಟ್ಟಣದ ಡಯಟ್‌ನಲ್ಲಿ ಶಿಕ್ಷಕರ ತರಬೇತಿ ಮುಗಿಸಿದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.

‘ಪಟ್ಟಣದ ಖಾಸಗಿ ಶಿಕ್ಷಕ ತರಬೇತಿ ಶಾಲೆಯೊಂದು ಅನಧಿಕೃತ ಎಂದು 1996ರಲ್ಲಿ ಘೋಷಿಸಲಾಗಿತ್ತು. ಇದರಿಂದ ನಾವೆಲ್ಲ ಆತಂಕಕ್ಕೆ ಒಳಗಾಗಿದ್ದೆವು. ನಾವು ಡಯಟ್‌ನಲ್ಲಿ ತರಬೇತಿ ಪಡೆಯಲು ಅಂದಿನ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಅವಕಾಶ ಕಲ್ಪಿಸಿದ್ದರು. ಇದರಿಂದ ತರಬೇತಿ ಪೂರ್ಣಗೊಳಿಸಲು ಸಾಧ್ಯವಾಗಿತ್ತು’ ಎಂದು ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಆಂಜನಮೂರ್ತಿ ನೆನಪಿಸಿಕೊಂಡರು.

‘ನಾವು ಬೇರೆ ಶಾಲೆಯಿಂದ ಬಂದರೂ ಡಯಟ್‌ನ ಉಪನ್ಯಾಸಕರು ಯಾವುದೇ ಭೇದಭಾವ ಮಾಡದೆ ಉತ್ತಮ ಶಿಕ್ಷಣ ನೀಡಿದ್ದರು. 70 ವಿದ್ಯಾರ್ಥಿಗಳ ಪೈಕಿ 55 ಮಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ್‌, ರಾಜಣ್ಣ, ಮಲ್ಲೇಶ್‌, ಗಂಗರಾಜು, ಸ್ವಾಮಿಗೌಡ, ನಾಗರಾಜು ಹಾಗೂ ಗಂಗಮಾರಯ್ಯ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT