ಗುರುವಾರ , ಅಕ್ಟೋಬರ್ 17, 2019
28 °C

ಮಹಿಳೆಗೆ ಗುಂಡೇಟು

Published:
Updated:

ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಹೊಸದೊಡ್ಡಿ ಗ್ರಾಮದ ನಿವಾಸಿ ರಾಜಮ್ಮ ಎಂಬುವರಿಗೆ, ಗೊಲ್ಲರಹಳ್ಳಿ ಗ್ರಾಮದ ನಿವಾಸಿ ರವಿ ಎಂಬಾತ ಬಂದೂಕಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ.

ಸೋಮವಾರ ರಾತ್ರಿ ವ್ಯಾಪಾರ ಮುಗಿಸಿ ಪೆಟ್ಟಿಗೆ ಅಂಗಡಿ ಬಾಗಿಲು ಮುಚ್ಚುತ್ತಿದ್ದಾಗ ರವಿ ಗುಂಡು ಹಾರಿಸಿ ದ್ದಾನೆ. ರಾಜಮ್ಮ ಅವರ ಹೊಟ್ಟೆ ಹಾಗೂ ಎಡಗೈಗೆ ಗುಂಡು ತಾಕಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಮಳವಳ್ಳಿ ಡಿವೈಎಸ್‌ಪಿ ಶೈಲೇಂದ್ರ ಹಾಗೂ ಸಿಪಿಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Post Comments (+)