ಗಾರ್ಮೆಂಟ್ಸ್‌ ಕಾರ್ಖಾನೆ ವ್ಯವಸ್ಥಾಪಕನಿಗೆ ಥಳಿತ

7
ಅನುಚಿತ ವರ್ತನೆಯಿಂದ ಕೆರಳಿದ ಮಹಿಳೆಯರು

ಗಾರ್ಮೆಂಟ್ಸ್‌ ಕಾರ್ಖಾನೆ ವ್ಯವಸ್ಥಾಪಕನಿಗೆ ಥಳಿತ

Published:
Updated:

ಬೆಂಗಳೂರು: ವಿದ್ಯಾರಣ್ಯಪುರದಲ್ಲಿರುವ ಗಾರ್ಮೆಂಟ್ಸ್‌ ಕಾರ್ಖಾನೆಯೊಂದರ ವ್ಯವಸ್ಥಾಪಕ ಬಸವರಾಜ್‌ ಎಂಬುವರನ್ನು ಅದೇ ಕಾರ್ಖಾನೆಯ ಮಹಿಳಾ ಉದ್ಯೋಗಿಗಳು ಮಂಗಳವಾರ ಥಳಿಸಿದ್ದಾರೆ.

ಸಂಬಂಧಿಕರ ಜತೆ ಕಾರ್ಖಾನೆಗೆ ಹೋಗಿದ್ದ ಉದ್ಯೋಗಿಗಳು, ಶರ್ಟ್‌ ಕಳಚಿ ಬಸವರಾಜ್‌ರನ್ನು ಮನಬಂದಂತೆ ಥಳಿಸಿದ್ದಾರೆ. ಘಟನೆ ಬಗ್ಗೆ ಸದ್ಯಕ್ಕೆ ಯಾರೊಬ್ಬರು ದೂರು ನೀಡಿಲ್ಲ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದರು.

ಉದ್ಯೋಗಿಯೊಬ್ಬರು, ‘ಮಹಿಳಾ ಸಿಬ್ಬಂದಿ ಜತೆ ಬಸವರಾಜ್ ಅನುಚಿತವಾಗಿ ವರ್ತಿಸುತ್ತಿದ್ದ. ಮೈಕೈ ಮುಟ್ಟಿ ಮಾತನಾಡಿಸುತ್ತಿದ್ದ. ಅದನ್ನು ಪ್ರಶ್ನಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಸಂಬಳ ಕೊಡದೆ ಪೀಡಿಸುತ್ತಿದ್ದ’ ಎಂದು ಹೇಳಿದರು.

ವ್ಯವಸ್ಥಾಪಕ ಬಸವರಾಜ್‌, ‘ಉದ್ಯೋಗಿಗಳ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಗುಂಪು ಕಟ್ಟಿಕೊಂಡು ಕಾರ್ಖಾನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ವಿಷಯವನ್ನು ಆಡಳಿತ ಮಂಡಳಿಗೆ ತಿಳಿಸುವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !