ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ: ವ್ಯಾಯಾಮ ಪರಿಕರ ಬಳಕೆಗೆ ನಿರ್ಬಂಧ

Last Updated 15 ಜೂನ್ 2021, 2:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಉದ್ಯಾನಗಳನ್ನು ಮುಂಜಾನೆಯ ವಾಯು ವಿಹಾರಕ್ಕಾಗಿ ಬೆಳಿಗ್ಗೆ 5ರಿಂದ 10 ಗಂಟೆವರೆಗೆ ಬಳಸುವುದಕ್ಕೆ ಬಿಬಿಎಂಪಿ ಅವಕಾಶ ನೀಡಿದೆ. ಆದರೆ, ಈ ಉದ್ಯಾನಗಳಲ್ಲಿ ಅಳವಡಿಸಿರುವ ವ್ಯಾಯಾಮ ಪರಿಕರಗಳ ಬಳಕೆಯನ್ನು ನಿರ್ಬಂಧಿಸಿದೆ.

ಉದ್ಯಾನಗಳಲ್ಲಿ ಅಳವಡಿಸಿರುವ ವ್ಯಾಯಾಮ ಪರಿಕರ ಬಳಕೆ ತಾಣಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದ್ದಾರೆ.

‘ಜಿಮ್‌ಗಳನ್ನು ಮುಚ್ಚಿರುವುದರಿಂದ ಹಾಗೂ ಸಾರ್ವಜನಿಕರ ಮುಕ್ತ ಬಳಕೆಗೆ ಲಭ್ಯವಿದ್ದ ವ್ಯಾಯಾಮ ಸೌಕರ್ಯಗಳನ್ನು ಉಪಯೋಗಿಸುವುನ್ನು ನಿರ್ಬಂಧಿಸಿರುವುದರಿಂದ ಅನನುಕೂಲವಾಗುತ್ತದೆ ಎಂಬುದು ನಮಗೂ ಗೊತ್ತು. ಆದರೆ, ಕೋವಿಡ್ ನಿಯಂತ್ರಣಕ್ಕಾಗಿ ಸೀಮಿತ ಅವಧಿವರೆಗೆ ಇವುಗಳ ಬಳಕೆ ನಿಷೇಧ ಅನಿವಾರ್ಯ ಎಂಬುದನ್ನು ಜನರೂ ಅರ್ಥಮಾಡಿಕೊಳ್ಳಬೇಕು’ ಎಂದು ಗೌರವ್‌ ಗುಪ್ತ ಸೋಮವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

ಉದ್ಯಾನಗಳಲ್ಲಿ, ಮನರಂಜನಾ ತಾಣಗಳಲ್ಲಿ ಹಾಗೂ ವ್ಯಾಯಾಮ ನಡೆಸುವ ಸ್ಥಳಗಳಲ್ಲಿ ಜನರು ಗುಂಪುಗೂಡಬಾರದು. ಪರಸ್ಪರ ಸುರಕ್ಷಿತ ಅಂತರ ಕಾಪಾಡಬೇಕು. ಮಕ್ಕಳು ಗುಂಪು ಸೇರಿ ಆಟವಾಡುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT