ಬೆಂಗಳೂರು: ಆಟೊ ಚಾಲಕರನ್ನು ಗುರಿಯಾಗಿಸಿ ಡಕಾಯಿತಿ ನಡೆಸುತ್ತಿದ್ದ ನಾಲ್ವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲಸೂರಿನ ಎಂ.ವಿ ಗಾರ್ಡನ್ ನಿವಾಸಿಗಳಾದ ಚರಣ್(21), ರಾಜೇಶ್ ಅಲಿಯಾಸ್ ಇಡ್ಲಿ(20), ವಿಷ್ಣು(20) ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಮಾರ್ಚ್ 1ರಂದು ಹಲಸೂರು ಹಳೆ ಮದ್ರಾಸ್ ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಇಬ್ಬರು ಆಟೊ ಚಾಲಕರನ್ನು ದರೋಡೆ ಮಾಡಿ ಹಣ, ಮೊಬೈಲ್, ಬೆಳ್ಳಿ ಸರವನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ಐಷಾರಾಮಿ ಜೀವನ: ಕೆಲವು ತಿಂಗಳಿಂದ ವಾಹನ ಸವಾರರ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು ಎಂಬುದು ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ. ಮಾದಕ ವಸ್ತು ಸೇವನೆ, ಮೋಜು–ಮಸ್ತಿಗಾಗಿ ಕೃತ್ಯ ಎಸಗುತ್ತಿದ್ದಾರೆ ಎಂದು ಪೊಲೀಸರು ಹೇಳಿದರು. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.