ಬೆಂಗಳೂರು: ಸರ್ಕಾರಿ ಶಾಲೆಗಳಂತೆ ಪದವಿ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ದಾಖಲಾತಿ ಕ್ಷೀಣಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 270 ಪದವಿ ಕಾಲೇಜುಗಳಲ್ಲಿ ಸುಮಾರು 70 ಸಾವಿರ ಸೀಟುಗಳು ಇವೆ. ಆದರೆ, ಅರ್ಧದಷ್ಟು ಸೀಟುಗಳೂ ಭರ್ತಿಯಾಗುತ್ತಿಲ್ಲ.

ವಿಶ್ವವಿದ್ಯಾಲಯವು ಮೂರಾಗಿ ವಿಭಜನೆಯಾದ ನಂತರ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ 270 ಪದವಿ ಕಾಲೇಜುಗಳು ಉಳಿದುಕೊಂಡಿವೆ. ಇವುಗಳಲ್ಲಿ ಬಿ.ಎ, ಬಿ.ಎಸ್ಸಿ, ಬಿಕಾಂ, ಬಿಸಿಎ, ಬಿಬಿಎ ಸೇರಿದಂತೆ ಒಟ್ಟು 220 ಕೋರ್ಸ್ಗಳು ಇವೆ. ಆದರೆ, ಹಲವು ಕೋರ್ಸ್ಗಳಿಗೆ ದಾಖಲಾಗಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ.

ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ 2024–25ರಲ್ಲಿ 36 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ, 2025–26ರಲ್ಲಿ ಸುಮಾರು 29 ಸಾವಿರ ಸೀಟುಗಳು ಅಷ್ಟೇ ಭರ್ತಿಯಾಗಿದ್ದವು. ಈ ವರ್ಷದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಶ್ವವಿದ್ಯಾಲಯ ಮತ್ತು ಕಾಲೇಜು ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ.

ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿರುವುದು, ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆ ಮತ್ತು ಸಾಂಪ್ರದಾಯಿಕವಾದ ಸಂಯೋಜನೆಗಳನ್ನೇ ಮುಂದುವರಿಸಿರುವುದರಿಂದ ಪದವಿ ಕೋರ್ಸ್ಗಳತ್ತ ವಿದ್ಯಾರ್ಥಿಗಳು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ ಎಂದು ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿ.ಕಾಂ, ಬಿಸಿಎ, ಬಿಬಿಎ ಮೊದಲಾದ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಬಿ.ಎಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಉದ್ಯೋಗ ಮತ್ತು ಕೌಶಲ ಆಧಾರಿತ ಕೋರ್ಸ್ಗಳತ್ತ ಒಲವು ಹೆಚ್ಚಾಗುತ್ತಿದ್ದು ಮಾನವಿಕ ವಿಷಯಗಳಿಗೆ ಬೇಡಿಕೆ ಇಲ್ಲ ಎನ್ನುತ್ತಾರೆ ನಗರದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನಾಗೇಂದ್ರ ಕುಮಾರ್.

‘ಬಿ.ಎಸ್ಸಿಯಲ್ಲಿ ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಬಿಸಿಎ, ಬಿ.ಕಾಂ ಕೋರ್ಸ್ಗಳಿಗೆ ಈಗಲೂ ಬೇಡಿಕೆ ಇದೆ. ಆದರೆ, ಸಾಂಪ್ರದಾಯಿಕವಾದ ಹಳೆಯ ಸಂಯೋಜನೆಯ ಕಲಾ ವಿಷಯಗಳ ಪದವಿ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಈ ರೀತಿಯ ವಾತಾವರಣ ಎಲ್ಲ ಕಡೆಯೂ ಇದೆ’ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬದವರ ಮಕ್ಕಳು ಸರ್ಕಾರಿ ಕಾಲೇಜುಗಳಿಗೆ ಬರುತ್ತಾರೆ. ಮನೆಯಲ್ಲಿ ಸಮಸ್ಯೆಯಿರುವ ಕಾರಣ, ಶಿಕ್ಷಣದ ಜೊತೆ ಅರೆಕಾಲಿಕ ಉದ್ಯೋಗದತ್ತ ಆಸಕ್ತಿ ತೋರಿಸುತ್ತಾರೆ. ಹೀಗಾಗಿ ಕೆಲವರು ಮಧ್ಯದಲ್ಲೇ ಶಿಕ್ಷಣ ನಿಲ್ಲಿಸುತ್ತಾರೆ. ಕೆಲವರು ಪಿಯುಸಿ ನಂತರ ಕಾಲೇಜಿಗೆ ಸೇರುವುದಿಲ್ಲ. ಹೀಗಾಗಿ ದಾಖಲಾತಿ ಕಡಿಮೆ ಆಗಿದೆ ಎಂದು ಮತ್ತೊಬ್ಬ ಪ್ರಾಂಶುಪಾಲರು ತಿಳಿಸಿದರು.

ಪಿಯುಸಿ ನಂತರ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ಗಳಿಗೆ ಆದ್ಯತೆ ನೀಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇದಲ್ಲದೆ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. ವೃತ್ತಿ ಶಿಕ್ಷಣ, ಕೌಶಲ ಆಧಾರಿತ ಕೋರ್ಸ್ಗಳಿಗೆ ಹೋಗದ ವಿದ್ಯಾರ್ಥಿಗಳು ಮಾತ್ರ ಪದವಿ ಕಾಲೇಜುಗಳಿಗೆ ಬರುತ್ತಾರೆ. ಈ ಸಮಸ್ಯೆ ಎಲ್ಲ ಕಡೆ ಇದೆ. ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಂಶುಪಾಲರಿಗೆ ಸೂಚನೆ

ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕುರಿತು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಹತ್ತಿರದ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ, ತಮ್ಮ ಕಾಲೇಜಿನಲ್ಲಿ ಒದಗಿಸುವ ಸೌಲಭ್ಯಗಳು, ಕೋರ್ಸ್ಗಳ ಬಗ್ಗೆ ಮಾಹಿತಿ ನೀಡುವಂತೆ ವಿಶ್ವವಿದ್ಯಾಲಯದ ಕುಲಸಚಿವರಾದ ಕೆ.ಟಿ.ಶಾಂತಲಾ ಅವರು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.

2026–27ನೇ ಸಾಲಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಆಕರ್ಷಿಸಿ, ಪ್ರವೇಶ ಸಂಖ್ಯೆಯನ್ನು ಹೆಚ್ಚಿಸುವಂತೆ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರಿಗೆ ಅವರು ತಿಳಿಸಿದ್ದಾರೆ.

ಹೊಸ ಕೋರ್ಸ್ಗಳಿಗೆ ಚಾಲನೆ

ಬೆಂಗಳೂರು ವಿಶ್ವವಿದ್ಯಾಲಯವು ಹೊಸದಾಗಿ ಬಿಎಸ್ಸಿ (ಎಲೆಕ್ಟ್ರಾನಿಕ್ ಮಿಡಿಯಾ), ಬಿಸಿಎ (ಕೃತಕ ಬುದ್ಧಿಮತ್ತೆ), ವಿಜ್ಞಾನ ವಿಭಾಗದಲ್ಲಿ ಐದು ವರ್ಷದ ಇಂಟಿಗ್ರೇಟೆಡ್ ಕೋರ್ಸ್ (ಬಿಎಸ್ಸಿ+ಎಂ.ಎಸ್ಸಿ) ಆರಂಭಿಸಿದೆ. ಇದಲ್ಲದೆ ಉದ್ಯಮಗಳೊಂದಿಗೆ ಚರ್ಚೆ ನಡೆಸಿ, ಭವಿಷ್ಯದಲ್ಲಿ ಅವರಿಗೆ ಯಾವ ರೀತಿಯ ಕೌಶಲ ಇರುವ ಉದ್ಯೋಗಿಗಳ ಅವಶ್ಯಕತೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಕೋರ್ಸ್ಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಮುಂದಾಗಿದೆ.

ವಿಧಿವಿಜ್ಞಾನ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ವಾಣಿಜ್ಯ ನಿರ್ವಹಣೆ ಇತ್ಯಾದಿ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿಶ್ವವಿದ್ಯಾಲಯದಲ್ಲಿ ಇರುವ ಕೋರ್ಸ್ಗಳ ಬಗ್ಗೆ ಮಾಧ್ಯಮಗಳ ಜೊತೆಗೆ, ಸಾಮಾಜಿಕ ಜಾಲತಾಣಗಳ ಮೂಲಕವೂ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ ಎಂದು ಕುಲಪತಿ ಡಾ.ಎಸ್.ಎಂ. ಜಯಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.