ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಂಗಣ ಕಟ್ಟಡದಿಂದ ಬಿದ್ದು‌ ಕಾರ್ಮಿಕ ಸಾವು: ಗುತ್ತಿಗೆದಾರ, ಎಂಜಿನಿಯರ್‌ ಬಂಧನ

Last Updated 10 ಸೆಪ್ಟೆಂಬರ್ 2021, 16:29 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಬಳಿ ನಿರ್ಮಿಸಲಾಗುತ್ತಿರುವ‌ ಸಭಾಂಗಣ ‌ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾರ್ಮಿಕ ಜಾಸನ್ ಮಂಗೋರಿ (23) ಎಂಬುವರು ಮೃತಪಟ್ಟಿದ್ದಾರೆ.

ಒಡಿಶಾದ‌ ಜಾಸನ್, ಎರಡು‌ ವರ್ಷಗಳ‌ ಹಿಂದೆ ನಗರಕ್ಕೆ ಬಂದಿದ್ದರು. ಕಟ್ಟಡ ನಿರ್ಮಾಣದಲ್ಲಿ‌ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 'ಜಗಜೀವನ್ ರಾಮ್ ಸಭಾಂಗಣ' ಕಟ್ಟಡ ‌ನಿರ್ಮಿಸಲಾಗುತ್ತಿತ್ತು. ಹಬ್ಬದ‌‌ ದಿನವಾದ ಶುಕ್ರವಾರವೂ ಕೆಲಸಕ್ಕೆ‌ ಬಂದಿದ್ದ ಜಾಸನ್, ಎರಡನೇ ಮಹಡಿಗೆ ಹವಾನಿಯಂತ್ರಕ (ಎ.ಸಿ) ಬಿಡಿಭಾಗಗಳನ್ನು ‌ಸಾಗಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮಹಡಿಯಿಂದ ಬಿದ್ದು ತೀವ್ರ ಗಾಯಗೊಂಡು ಜಾಸನ್ ಮೃತಪಟ್ಟಿದ್ದಾರೆ.

'ಕೆಲಸದ ಸ್ಥಳದಲ್ಲಿ ಯಾವುದೇ‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನಿರ್ಲಕ್ಷ್ಯ ವಹಿಸಿ ಕಾರ್ಮಿಕನ ಸಾವಿಗೆ ಕಾರಣವಾದ ಆರೋಪದಡಿ ಗುತ್ತಿಗೆದಾರ ಪ್ರಕಾಶ್ ರೆಡ್ಡಿ, ವೋಲ್ಟಸ್ ಕಂಪನಿ ಪ್ರತಿನಿಧಿ ಗಿರಿ ಹಾಗೂ‌ ಎಂಜಿನಿಯರ್ ಅಲಿ ರಜಾಕ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಮೂವರನ್ನೂ ಬಂಧಿಸಲಾಗಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT