ಬೆಂಗಳೂರು: ಯುದ್ದಕ್ಕೆ ಮುಂದಾಗದೇ ನಾವೆಲ್ಲರೂ ಶಾಂತಿದೂತರಾಗೋಣ. ಸಾಮಾನ್ಯ ಜನರ ಬದುಕಿನ ಮೇಲೆ ಆಗುವ ಪರಿಣಾಮ ತಪ್ಪಿಸೋಣ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ಸಲಹೆ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಶೇಷಾದ್ರಿಪುರಂ ಕಾಲೇಜು ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಯುದ್ದ ಬೇಡ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಯಾವುದೇ ದೇಶದಲ್ಲಿ ಯುದ್ದ ನಡೆದರೂ ಅದರ ಪರಿಣಾಮ ಪ್ರತಿಯೊಬ್ಬರ ಮೇಲೂ ಒಂದಿಲ್ಲ ಒಂದು ರೀತಿ ಆಗಲಿದೆ. ಇದರಿಂದ ಜನ ತೊಂದರೆಗೆ ಸಿಲುಕಬೇಕಾಗುತ್ತದೆ. ಗಾಂಧಿ ತತ್ವವನ್ನು ಅಳವಡಿಸಿಕೊಂಡು ಸಮಾಜಮುಖಿಯಾಗೋಣ ಎಂದು ಹೇಳಿದರು.

ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಜಗತ್ತಿನಲ್ಲಿ ನೆಲ್ಸನ್ ಮಂಡೆಲಾ, ಬರಾಕ್ ಒಬಾಮ ಅವರಂತಹ ನಾಯಕರಿಗೂ ಪ್ರೇರಣೆಯಾದದ್ದು ಮಹಾತ್ಮ ಗಾಂಧಿಯೇ. ಶಾಂತಿ ದಿಕ್ಕಿನಲ್ಲಿ ನಡೆದರೆ ಸಮಾಜ ಸುಖಿಯಾಗಿರಲಿದೆ. ವಿಶ್ವದ ಹಲವು ಸಮಸ್ಯೆಗಳಿಗೆ ಗಾಂಧಿ ಚಿಂತನೆಯೇ ಪರಿಹಾರ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ಯುದ್ದ ಆರಂಭವಾಯಿತು ಎಂದರೆ ಹಲವು ದೇಶಗಳಲ್ಲಿ ಅನಿಲ, ತೈಲದ ಸಮಸ್ಯೆ ಶುರುವಾಗಿ ಸಾಮಾನ್ಯ ಜನರನ್ನು ಬಾಧಿಸುತ್ತದೆ. ಕಟ್ಟಡ ನಿರ್ಮಾಣ ಉತ್ಪನ್ನ ದುಬಾರಿಯಾಗಿ ಜನ ತೊಂದರೆ ಅನುಭವಿಸುತ್ತಾರೆ. ಯೂರಿಯಾ ಬೆಲೆ ಏರಿಕೆಯಾದರೆ ಕೃಷಿ ಮೇಲೆ ಪರಿಣಾಮ ಉಂಟಾಗಿ ಆಹಾರ ಉತ್ಪಾದನೆ ಕುಂಠಿತವಾಗಲಿದೆ. ಪ್ರತಿಯೊಬ್ಬರು ಸುಮ್ಮದೇ ಕೂರದೇ ಯುದ್ದವನ್ನು ವಿರೋಧಿಸಬೇಕು ಎಂದು ಹೇಳಿದರು.

ಸರ್ವೋದಯ ನಾಯಕ ಇ.ಪಿ.ಮೆನನ್, ಗಾಂಧಿ ಚಿಂತಕ ಜಿ.ಬಿ.ಶಿವರಾಜು, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಶೇಷಾದ್ರಿ ಪುರಂ ಕಾಲೇಜು ಆಡಳಿತ ಸಲಹಾ ಮಂಡಳಿ ಅಧ್ಯಕ್ಷ ಎಂ.ಎಸ್.ನಟರಾಜ್, ಪ್ರಾಂಶುಪಾಲ ಮೇಜರ್ ಐ.ಆನಂದಪ್ಪ, ಗಾಂಧಿ ಅಧ್ಯಯನ ಕೇಂದ್ರ ಸಂಚಾಲಕಿ ಎಚ್.ಎಂ.ಗೀತಾ ಉಪಸ್ಥಿತರಿದ್ದರು.

ಯುದ್ದ ಬೇಡ ಎನ್ನುವ ಕುರಿತು ಶಾಂತಿ ಜಾಥಾವನ್ನು ಗುರುವಾರ ಆಯೋಜಿಸಲು ಹಿಂದೆಯೇ ನಿರ್ಧರಿಸಲಾಗಿತ್ತಾದರೂ ಅದಕ್ಕೆ ಅನುಮತಿ ಸಿಗದೇ ಗಾಂಧಿಭವನ ಆವರಣಕ್ಕೆ ಕಾರ್ಯಕ್ರಮ ಸೀಮಿತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.