ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯನೆಂದು ಹೇಳಿಕೊಂಡಿರುವ ಹನಿಯೂರು ಚಂದ್ರೇಗೌಡ ಎಂಬುವವರನ್ನು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೊ ಹಾಗೂ ಫೋಟೊಗಳನ್ನು ಚಂದ್ರೇಗೌಡ ತೆಗೆದುಕೊಳ್ಳುತ್ತಿದ್ದರು. ಬಳಿಕ ಆ ಫೋಟೊ–ವಿಡಿಯೊಗಳನ್ನು ಇಟ್ಟುಕೊಂಡು ಪೀಡಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಆರೋಪಿಯ ಮೊಬೈಲ್ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗಿದೆ. ಮೊಬೈಲ್ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಫೋಟೊಗಳು–ವಿಡಿಯೊ ಸಿಕ್ಕಿವೆ. ಕೆಲವು ಧಾರಾವಾಹಿಗಳಲ್ಲೂ ಚಂದ್ರೇಗೌಡ ನಟಿಸಿದ್ದರು. ಅಲ್ಲದೇ ಪತ್ರಕರ್ತ, ಉಪನ್ಯಾಸಕ, ಜಾನಪದ, ಬುಡಕಟ್ಟು ಸಂಶೋಧಕನಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದಾಗಿ ಬಿಂಬಿಸಿಕೊಂಡಿದ್ದರು. ನಕಲಿ ಗುರುತಿನ ಚೀಟಿ ಮಾಡಿಕೊಂಡು ಹಲವರಿಗೆ ಬೆದರಿಕೆ ಹಾಕಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ದೂರಿನಲ್ಲಿ ಏನಿದೆ?

‘ಪತಿಯ ನಡುವೆ ವೈಮನಸ್ಸು ಉಂಟಾಗಿ ದೂರುದಾರೆ ಪ್ರತ್ಯೇಕವಾಗಿ ನೆಲಸಿದ್ದರು. ಮೇಕಪ್ ಆರ್ಟಿಸ್ಟ್ ಆಗಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು. ಮದುವೆ ಸಮಾರಂಭ, ಚಿತ್ರೀಕರಣಕ್ಕೆ ಹೋಗಿ ಮೇಕಪ್ ಕೆಲಸ ಮಾಡುತ್ತಿದ್ದರು. 2021ರಲ್ಲಿ ಚಂದ್ರೇಗೌಡರ ಪರಿಚಯವಾಗಿತ್ತು. ಧಾರಾವಾಹಿಗಳಲ್ಲಿ ನಟಿಸಿದ್ದೇನೆ; ಶಾರದಾ ಲೇಔಟ್ನಲ್ಲಿ ನೆಲಸಿದ್ದೇನೆ ಎಂಬುದಾಗಿ ಆರೋಪಿಯು ಮಹಿಳೆಯನ್ನು ಪರಿಚಯಿಸಿಕೊಂಡಿದ್ದರು. ಮೊಬೈಲ್ ಸಂಖ್ಯೆ ಪಡೆದುಕೊಂಡು ಮೇಕಪ್ ಸಂಬಂಧಿಸಿದ ಕೆಲಸಗಳಿದ್ದರೆ ಕರೆ ಮಾಡುವುದಾಗಿ ಆರೋಪಿ ಹೇಳಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪತ್ನಿಯಿಂದ ವಿಚ್ಛೇದನ ಪಡೆದುಕೊಂಡು ನಿಮ್ಮನ್ನೇ ಮದುವೆ ಆಗುತ್ತೇನೆಂದು ನಂಬಿಸಿ ದೂರುದಾರೆಯ ಜತೆಗೆ ಲೈಂಗಿಕ ಸಂಪರ್ಕ ನಡೆಸಿದ್ದರು. ಖಾಸಗಿ ಕ್ಷಣವನ್ನು ವಿಡಿಯೊ ಮಾಡಿಕೊಂಡಿದ್ದ ಆರೋಪಿ, ಆ ವಿಡಿಯೊ ಇಟ್ಟುಕೊಂಡು ಹೆದರಿಸುತ್ತಿದ್ದರು. ಹೇಳಿದಂತೆ ಕೇಳಬೇಕೆಂದು ಹೇಳಿ ಹಂತಹಂತವಾಗಿ ₹5 ಲಕ್ಷ ಪಡೆದುಕೊಂಡಿದ್ದಾರೆ’ ಎಂಬ ದೂರಿನ ಪ್ರತಿ ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

‘ಸಂತ್ರಸ್ತೆಯ ಆಧಾರ್ ಕಾರ್ಡ್ ಪಡೆದಿದ್ದ ಆರೋಪಿ, ಬಾಡಿಗೆ ಮನೆಯೊಂದಕ್ಕೆ ಕರಾರು ಪತ್ರವನ್ನೂ ಮಾಡಿಸಿದ್ದರು. ಅಲ್ಲದೇ ಸಂತ್ರಸ್ತೆಯ ಪುತ್ರಿಯ ಶೈಕ್ಷಣಿಕ ಸಂಬಂಧಿತ ದಾಖಲಾತಿಗಳನ್ನೂ ಬದಲಾಯಿಸಿ, ತಾನೇ ಮಹಿಳೆಯ ಪತಿ ಎಂಬುದಾಗಿ ಬಿಂಬಿಸಲು ಹೊರಟಿದ್ದರು. ಪೊಲೀಸ್ ಇಲಾಖೆಯ ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಟೋಲ್ಗಳಲ್ಲಿ ತೋರಿಸುತ್ತಿದ್ದರು’ ಎಂದೂ ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.