ಶನಿವಾರ, ಜುಲೈ 2, 2022
27 °C

ಮೇ 1ಕ್ಕೆ ಹವ್ಯಕ ವಿಶೇಷ ಪ್ರಶಸ್ತಿಗಳ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಸಂಸ್ಥಾಪನೋತ್ಸವ ಹಾಗೂ ವಿವಿಧ ಸಾಧಕರಿಗೆ ‘ಹವ್ಯಕ ವಿಶೇಷ ಪ್ರಶಸ್ತಿ’ಗಳ ಪ್ರದಾನ ಕಾರ್ಯಕ್ರಮವನ್ನು ಮೇ 1ರಂದು ಸಂಜೆ 4 ಗಂಟೆಗೆ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದೆ.

ಅತಿಥಿಗಳಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಭಾಗವಹಿಸಲಿದ್ದಾರೆ. ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ‘ಪಲ್ಲವ ಪುರಸ್ಕಾರ’ ಪ್ರದಾನವೂ ನಡೆಯಲಿದೆ. ಪ್ರಕಾಶ್‌ ಹೆಗಡೆ ಕಲ್ಲಾರೆಮನೆ ಮತ್ತು ಬಳಗದಿಂದ ‘ವೇಣು ನಿನಾದ’ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕೃತರು: ಗಜಾನನ ಶರ್ಮ (ಹವ್ಯಕ ವಿಭೂಷಣ), ಉದಯಕುಮಾರ್ ನೂಜಿ, ಬಳ್ಕೂರು ಕೃಷ್ಣಯಾಜಿ, ನಾರಾಯಣ ದಾಸ (ಹವ್ಯಕ ಭೂಷಣ), ಅಶ್ವಿನಿ ಭಟ್, ರಾಜಾರಾಮ ಸಿ.ಜಿ., ಅಶ್ವಿನಿಕುಮಾರ್ ಭಟ್ (ಹವ್ಯಕ ಶ್ರೀ), ತ್ರಿಯಂಬಕ ಗಣೇಶ ಹೆಗಡೆ (ಹವ್ಯಕ ಸೇವಾಶ್ರೀ).

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು