ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾವು 2025–26ನೇ ಸಾಲಿನ ‘ಹವ್ಯಕ ವಿಶೇಷ ಪ್ರಶಸ್ತಿ’ಗಳನ್ನು ಗುರುವಾರ ಪ್ರಕಟಿಸಿದ್ದು, ‘ಹವ್ಯಕ ವಿಭೂಷಣ’ ಪ್ರಶಸ್ತಿಗೆ ತಾಳಮದ್ದಳೆ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಹಾಗೂ ಶಿಕ್ಷಣ ತಜ್ಞ ಎಸ್. ಶಂಭು ಭಟ್ ಕಡತೋಕ ಆಯ್ಕೆಯಾಗಿದ್ದಾರೆ.

‘ಹವ್ಯಕ ಭೂಷಣ’ ಪ್ರಶಸ್ತಿಗೆ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ, ಪಶು ತಜ್ಞ ವೈ.ವಿ. ಕೃಷ್ಣಮೂರ್ತಿ, ಉದ್ಯಮಿ ಉಮೇಶ ಬಂದಗದ್ದೆ ಭಾಜನರಾಗಿದ್ದಾರೆ. ‘ಹವ್ಯಕ ಶ್ರೀ’ ಪ್ರಶಸ್ತಿಗೆ ಕಸೂತಿ ಉದ್ಯಮಿ ಪೂರ್ಣಿಮಾ ಕೆ. ಭಟ್, ಯಜುರ್ವೇದ ಘನಪಾಠಿ ಸುಚೇತನ ಭಟ್, ಸಮಾಜ ಸೇವಕ ಆನಂದ ಹೆಗಡೆ ಶೀಗೇಹಳ್ಳಿ, ಕ್ರಿಕೆಟ್ ಆಟಗಾರ್ತಿ ಪ್ರತ್ಯೂಷ ಕುಮಾರ್ ಆಯ್ಕೆಯಾಗಿದ್ದಾರೆ.

‘ಹವ್ಯಕ ಸೇವಾಶ್ರೀ’ ಪ್ರಶಸ್ತಿಗೆ ಬಿ.ವಿ. ನರಹರಿ ರಾವ್, ಬೋನಂತಾಯ ಶಿವಶಂಕರ ಭಟ್ ಹಾಗೂ ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ ಭಾಜನರಾಗಿದ್ದಾರೆ.

ಇದೇ 29ರಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಮಹಾಸಭೆಯು 83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ಪಲ್ಲವ’ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ.

‘ಹವ್ಯಕ’ ಮಾಸಪತ್ರಿಕೆಯ ವಜ್ರಮಹೋತ್ಸವ ವಿಶೇಷ ಸಂಚಿಕೆಯನ್ನು ಇದೇ ವೇಳೆ ಜನಾರ್ಪಣೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.