ಪೀಣ್ಯ ದಾಸರಹಳ್ಳಿ: ಶಾಂತಿ ಮತ್ತು ಸಂತೃಪ್ತಿಯಿಂದ ಜೀವನ ನಡೆಸಲು ಆರೋಗ್ಯ ಉತ್ತಮವಾಗಿರಬೇಕು ಎಂದು ಕೆಬಿಸಿ ಟ್ರಸ್ಟ್ ಅಧ್ಯಕ್ಷ ಕೆ.ಸಿ. ಅಶೋಕ್ ತಿಳಿಸಿದರು.
ಗಾಂಧಿ ಜಯಂತಿ ಪ್ರಯುಕ್ತ ಕಮ್ಮಗೊಂಡನಹಳ್ಳಿಯ ಅಶೋಕ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
27 ವರ್ಷಗಳಿಂದ ಕೆಬಿಸಿ ಟ್ರಸ್ಟ್ ವತಿಯಿಂದ ಆರೋಗ್ಯ ಉಚಿತ ಶಿಬಿರ ನಡೆಸಲಾಗುತ್ತಿದೆ. 3000ಕ್ಕೂ ಹೆಚ್ಚು ಬಾಟಲಿ ರಕ್ತವನ್ನು ರಕ್ತನಿಧಿಗೆ ನೀಡಲಾಗಿದೆ. ನೇತ್ರ ತಪಾಸಣೆ ಮಾಡಿಸಿ ಸಾವಿರಕ್ಕೂ ಹೆಚ್ಚು ಜನರಿಗೆ ಕನ್ನಡಕ, ನೂರಾರು ಜನರಿಗೆ ನೇತ್ರ ಚಿಕಿತ್ಸೆ, 15ಕ್ಕೂ ಹೆಚ್ಚು ಜನರಿಗೆ ಹೃದಯ ಚಿಕಿತ್ಸೆ ನಡೆಸಲಾಗಿದೆ. ವಿವಿಧ ರೋಗಗಳಿಗೆ ಔಷಧ ನೀಡಲಾಗಿದೆ’ ಎಂದು ತಿಳಿಸಿದರು.
200ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಸಾವಿರಾರು ಮಂದಿ ಆರೋಗ್ಯ ತಪಾಸಣೆ ನಡೆಸಿದರು. ಮುಖಂಡರಾದ ರೋಷನ್, ಜಬ್ಬಾರ್, ರಮೇಶ ಯಾದವ್, ಸಲೀಂ, ಅನಸೂಯಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.