ಬೆಂಗಳೂರು: ‘ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಆಗಿರುವ ದಾದಿಯರು (ನರ್ಸ್) ಕಡಿಮೆ ಸಂಬಳ, ಅನಿಯಮಿತ ಕೆಲಸದ ಅವಧಿ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸುವ ಹೊಣೆಗಾರಿಕೆ ನಮ್ಮದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕರ್ನಾಟಕ ಶುಶ್ರೂಷಕ ಶಿಕ್ಷಕರ ಸಂಘದ ಸಹಯೋಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ದಾದಿಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ನರ್ಸ್ ವೃತ್ತಿ ಅತ್ಯಂತ ಸಂಕೀರ್ಣವಾದುದು. ಆರೋಗ್ಯ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ನರ್ಸ್ಗಳ ಪಾತ್ರ ಹಿರಿದು. ಎಷ್ಟೋ ಬಾರಿ ದಾದಿಯರ ವರ್ತನೆ ರೋಗಿಗಳಿಗೆ ಧೈರ್ಯ ನೀಡುತ್ತದೆ’ ಎಂದು ಶ್ಲಾಘಿಸಿದರು.

‘ನರ್ಸ್ ತರಬೇತಿ ನೀಡುವುದು ಬಹಳ ಮುಖ್ಯ. ಸಂಖ್ಯೆಗಿಂತ ಗುಣಮಟ್ಟ ಪ್ರಮುಖವಾದುದು. ನರ್ಸ್ ಆಗಿ ಕೆಲಸ ಮಾಡುವಾಗ ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾಯಕತ್ವ ಗುಣ, ಮಾತೃಹೃದಯ, ಅನುಕಂಪ, ಮಾನಸಿಕ ದೃಢತೆಯೂ ಬಹಳ ಮುಖ್ಯವಾಗುತ್ತದೆ’ ಎಂದು ತಿಳಿಸಿದರು.

ನರ್ಸ್ ತರಬೇತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.

ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್, ಶಾಸಕ ಡಾ. ರಂಗನಾಥ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಭಗವಾನ್, ಕರ್ನಾಟಕ ಶುಶ್ರೂಷಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.