ಕಸಾಪ ಅಧ್ಯಕ್ಷರ ಅವಧಿ ಪ್ರಶ್ನೆ: ವಿಚಾರಣೆ ಮುಂದಕ್ಕೆ

7

ಕಸಾಪ ಅಧ್ಯಕ್ಷರ ಅವಧಿ ಪ್ರಶ್ನೆ: ವಿಚಾರಣೆ ಮುಂದಕ್ಕೆ

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯ ಘಟಕದ ಕಾರ್ಯಕಾರಿ ಸಮಿತಿಯ ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಿರುವ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಉಪ ನಿಬಂಧಕರು ಹಾಗೂ ನೋಂದಾಣಾಧಿಕಾರಿ ಇದೇ 20ಕ್ಕೆ ಮುಂದೂಡಿದ್ದಾರೆ.

ಅರೆ ನ್ಯಾಯಿಕ ವಿಚಾರಣಾಧಿಕಾರಿಯಾದ ನೋಂದಣಾಧಿಕಾರಿಯು, ಈ ಕುರಿತಂತೆ ಪರಿಷತ್ ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಉಡುಪಿ ಜಿಲ್ಲೆಯ ಕೋಟಾದಲ್ಲಿ ನಡೆದ ಕಸಾಪ ರಾಜ್ಯ ಘಟಕದ ಸಭೆಯಲ್ಲಿ ಅಂದಿನ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.

ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಗಿತ್ತು.

ಈ ನಿರ್ಣಯವನ್ನು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಕೋ.ವೆಂ.ರಾಮಕೃಷ್ಣೇಗೌಡ, ಸಾಹಿತಿ ಹನುಮಾಕ್ಷಿ ಗೋಗಿ, ಕಸಾಪ ಸಮಾನ ಮನಸ್ಕರ ವೇದಿಕೆ ಸಂಚಾಲಕ ಆರ್‌.ಶಿವಕುಮಾರಸ್ವಾಮಿ ಕುರ್ಕಿ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !