ಹೆಬ್ಬಗೋಡಿ (ಆನೇಕಲ್): ಹೆಬ್ಬಗೋಡಿಯಲ್ಲಿ ಡಾ.ಬಿ.ಆರ್.ಅಂಭೇಡ್ಕರ್ ಯುವಕರ ಕ್ಷೇಮಾಭಿವೃದ್ಧಿ ಸಂಘದಿಂದ ಹೆಬ್ಬಗೋಡಿ ಕಬಡ್ಡಿ ಉತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಯುಕ್ತ ಮುಖ್ಯದ್ವಾರದಲ್ಲಿ ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಸಕ ಬಿ.ಶಿವಣ್ಣ ಮಾತನಾಡಿ, ಕಬಡ್ಡಿ ಪಂದ್ಯಾವಳಿಯು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ರಜೆ ದಿನಗಳನ್ನು ಮೊಬೈಲ್, ಟಿವಿ, ಲ್ಯಾಪ್ಟಾಪ್ಗಳಿಗೆ ಮೀಸಲಿಡುವ ಬದಲು ದೈಹಿಕ ಕ್ರೀಡೆಗಳಾದ ಕಬಡ್ಡಿ ಕಲಿಯಲು ಮುಂದಾಗಬೇಕು. ಪ್ರೊ ಕಬಡ್ಡಿ ನಂತರ ಕಬಡ್ಡಿಗೆ ಹೆಚ್ಚಿನ ಮಾನ್ಯತೆ ದೊರೆತಿದೆ. ಪಂದ್ಯವು ದೈಹಿಕ ಶಕ್ತಿ ಹೆಚ್ಚು ಮಾಡುವುದರ ಜೊತೆಗೆ ನಾಯಕತ್ವ ಗುಣವನ್ನು ಹೆಚ್ಚು ಮಾಡುತ್ತದೆ ಎಂದರು.

ಅಂಬೇಡ್ಕರ್ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಹೆಬ್ಬಗೋಡಿ ನಗರಸಭೆ ಸದಸ್ಯ ಕಬಡ್ಡಿ ಮಂಜು, ಬುಲೆಟ್ ಮುನಿಯಲ್ಲಪ್ಪ, ಮುಖಂಡರಾದ ಎಚ್.ಎಂ.ವೆಂಕಟೇಶ್, ಎಚ್.ಸಿ.ವೆಂಕಟೇಶ್, ಉಲ್ಲಾಸ್ ಶಿವಣ್ಣ, ವೆಂಕಟೇಶ್, ಶ್ರೀನಿವಾಸ್, ಮಂಜುನಾಥರೆಡ್ಡಿ, ಅರುಣ್, ದೀಪು, ನಾರಾಯಣಸ್ವಾಮಿ, ಹರೀಶ್ ರೆಡ್ಡಿ, ತಿಪ್ಪೇಸ್ವಾಮಿ, ಮುರಳಿ, ಮೂರ್ತಿ, ಪ್ರಶಾಂತ್, ಗಿರೀಶ್, ವಿನೋಧ್, ನಿಖಿಲ್, ವರುಣ್, ಪ್ರದೀಪ್, ಮಂಜುನಾಥ್, ಅಂಕುಶ್, ಪ್ರೀತಂ, ಗೌತಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-15-2135054594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.