ಬುಧವಾರ, ಆಗಸ್ಟ್ 4, 2021
26 °C
ವಿನಾಯಿತಿ ಕೋರಿದವನಿಗೆ ಪೊಲೀಸ್ ಕಮಿಷನರ್ ಉತ್ತರ

ಹೆಲ್ಮೆಟ್‌ ಪ್ರಾಣ ಕಾಪಾಡುವ ಕ್ರಮ, ಶಿಕ್ಷೆಯಲ್ಲ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಲ್ಮೆಟ್‌ ಧರಿಸುವುದರಿಂದ ಕೊರೊನಾ ಸೋಂಕು ಹರಡುವ ಭಯವಿದ್ದು, ಸೋಂಕಿತರ ಸಂಖ್ಯೆ ಕಡಿಮೆ ಆಗುವವರೆಗೂ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡುವಂತೆ ಸಂಜಯ್ ಎಂಬುವರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಟ್ವೀಟ್ ಮಾಡಿದ್ದಾರೆ.

‘ಜನರು ತಮ್ಮ ಹೆಲ್ಮೆಟ್‌ಗಳನ್ನು ತೆಗೆದು ಸಾರ್ವಜನಿಕ ಸ್ಥಳ, ಟೇಬಲ್, ಕುರ್ಚಿ ಮೇಲೆ ಇಡುತ್ತಿದ್ದಾರೆ‍. ಸಾಮಾನ್ಯವಾಗಿ ಹೆಲ್ಮೆಟ್‌ಗಳನ್ನೂ ಯಾರೂ ಸ್ವಚ್ಛಗೊಳಿಸುವುದಿಲ್ಲ. ಸೋಂಕಿತ ವ್ಯಕ್ತಿ ಕೂಡ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಆ ಹೆಲ್ಮೆಟ್ ಈ ರೀತಿ ಎಲ್ಲೆಂದರಲ್ಲಿ ಇಟ್ಟರೆ ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚು’ ಎಂದು ಟ್ವೀಟ್‌ನಲ್ಲಿ ಸಂಜಯ್ ಹೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಭಾಸ್ಕರ್ ರಾವ್, ‘ಹೆಲ್ಮೆಟ್ ಕಡ್ಡಾಯ ನಿಯಮ ಪ್ರಾಣಾಪಾಯ ತಪ್ಪಿಸುವ ಕ್ರಮವೇ ಹೊರತು ಸಾರ್ವಜನಿಕರ ಮೇಲೆ ಹೇರಿರುವ ಶಿಕ್ಷೆಯಲ್ಲ. ನೀವು ಹೆಲ್ಮೆಟ್ ಧರಿಸದಿದ್ದರೆ ಅದು ನಿಮ್ಮ ಕುಟುಂಬಕ್ಕೆ ಮಾಡುವ ಅನ್ಯಾಯವಾಗುತ್ತದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು