ಭಾನುವಾರ, ಆಗಸ್ಟ್ 14, 2022
28 °C

ಅನಾಥ ಮಕ್ಕಳಿಗೆ ಸಹಾಯ ಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದಾಗಿ ಅಮ್ಮನನ್ನು ಕಳೆದುಕೊಂಡು ಅನಾಥರಾಗಿರುವ ಹಾರೋಗದ್ದೆಯ ವೈಷ್ಣವಿ, ವರ್ಷಿಣಿ ಹಾಗೂ ವೈಶಾಖ್‌ಗೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಶನಿವಾರದ ಸಂಚಿಕೆಯಲ್ಲಿ ‘ದೇವರು ಕ್ರೂರಿ, ಅಮ್ಮನನ್ನು ದೂರ ಮಾಡಿಬಿಟ್ಟ’ ಶೀರ್ಷಿಕೆಯಡಿ ಮಾನವೀಯ ವರದಿ ಪ್ರಕಟಿಸಿತ್ತು. 

‘ಮಾಲೂರಿನ ಇನ್‌ಸ್ಪೆಕ್ಟರ್ ಎಸ್‌.ಆರ್‌.ಜಗದೀಶ್‌ ಅವರು ಮಕ್ಕಳ ಶಿಕ್ಷಣಕ್ಕೆ ₹10 ಸಾವಿರ ನೆರವು ನೀಡಿದ್ದಾರೆ.  ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಂದಲೂ ಕರೆ ಬಂದಿದೆ’ ಎಂದು ವೈಷ್ಣವಿ ಅವರ ಮಾವ ಕೃಷ್ಣಪ್ಪ ತಿಳಿಸಿದರು. 

ಕೃಷ್ಣಪ್ಪ, ಸರ್ಜಾಪುರ ಬಳಿಯ ಕೋಟಿಗಾನಹಳ್ಳಿ ನಿವಾಸಿ. ಅವರ ಮನೆಯಲ್ಲೇ ಈ ಮಕ್ಕಳು ಇದ್ದಾರೆ. ನೆರವು ನೀಡಲು ಬಯಸುವವರು 9632281338 ಸಂಖ್ಯೆ ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು