ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಗ್ರಾಮಸ್ಥರು

Last Updated 28 ಮಾರ್ಚ್ 2021, 4:01 IST
ಅಕ್ಷರ ಗಾತ್ರ

ಹೆಸರಘಟ್ಟ: ಅಣಬೆ ಬೇಸಾಯ, ಹೈನುಗಾರಿಕೆ, ಜೇನು ಸಾಕಾಣಿಕೆಯಿಂದ ರೈತರಿಗೆ ಬರುವ ಆದಾಯ, ಮಣ್ಣಿನ ಪರೀಕ್ಷೆಯಿಂದ ಕೃಷಿಗೆ ಆಗುವ ಅನುಕೂಲಗಳ ಬಗ್ಗೆ ದಾಸನಪುರ ಹೋಬಳಿ ತೋಟಗೆರೆ ಗ್ರಾಮಸ್ಥರಿಗೆ ದೊಡ್ಡಬಳ್ಳಾಪುರದ ರೈ ತಾಂತ್ರಿಕ ಮಹಾ ವಿದ್ಯಾಲಯದ ಕೃಷಿ ವಿಭಾಗದ ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ವಿದ್ಯಾಲಯದಿಂದ ಹಮ್ಮಿಕೊಂಡಿರುವ ಕೃಷಿ ಪ್ರಸಾರ 2021ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರಿಗೆ ಕೃಷಿಯ ತಾಂತ್ರಿಕತೆ ಮತ್ತು ಬೆಳೆಗಳಿಗೆ ಬರುವ ರೋಗಗಳ ಕುರಿತು ವಿದ್ಯಾರ್ಥಿಗಳು ವಿವರಿಸಿದರು.

‘ತೋಟಗೆರೆ ಗ್ರಾಮದಲ್ಲಿಸುಮಾರು ಒಂದುವರೆ ತಿಂಗಳು ವಾಸ್ತವ್ಯ ಹೂಡಿ ಕೃಷಿ ಕ್ಷೇತ್ರದಲ್ಲಿ ಅವರಿಗೆ ಬೇಕಾಗಿರುವ ಜ್ಞಾನ, ಮಾಹಿತಿ ಕಲೆ ಹಾಕಲಾಗಿದೆ. ಸಂಪ್ರದಾಯಿಕ ಕೃಷಿ ಪದ್ದತಿಯಲ್ಲಿ ಯಶಸ್ವು ಗಳಿಸಿದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದೇವೆ.‌ ಇಡೀ ಗ್ರಾಮದ ಕೃಷಿ ಪದ್ಧತಿ ಅವಲೋಕನ ಮಾಡಿ‌ ಅವರಿಗೆ ಬೇಕಿರುವ ಅರಿವು ನೀಡಲಾಗಿದೆ’ ಎಂದು ವಿದ್ಯಾರ್ಥಿನಿ ಟಿ.ಅರ್.ರಮ್ಯಾ ಸಂತಸ ವ್ಯಕ್ತಪಡಿಸಿದರು.

‘ಕೃಷಿ ಮಾಡುತ್ತಲೇ ಗ್ರಾಮಸ್ಥರು ತಮ್ಮ ಖರ್ಚುಗಳನ್ನು ನಿಭಾಯಿಸಲು ಹಲವು ಉಪ ಕಸಬುಗಳನ್ನು ಮಾಡಬಹುದು. ಉದಾಹರಣೆಗೆ ಜೇನು ಕೃಷಿ. ಇದರ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದೀವಿ. ಹತ್ತಾರು ಗ್ರಾಮಸ್ಥರು ಜೇನು ಕೃಷಿ ಮಾಡಲು ಮುಂದೆ ಬಂದಿದ್ದಾರೆ’ ಎಂದು ವಿದ್ಯಾರ್ಥಿನಿ ಪುಷ್ಪ ಶೆಟ್ಟರ್ ತಿಳಿಸಿದರು.

‘ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಬಗ್ಗೆ ನಮಗೆ ತಿಳಿಯದೇ ಇರುವ ಅನೇಕ ಸಂಗತಿಗಳನ್ನು ತಿಳಿಸಿದರು. ರೇಷ್ಮ, ಅಣಬೆ ಬೇಸಾಯದ ಬಗ್ಗೆ ಅಸಕ್ತದಾಯಕ ಮಾಹಿತಿ ನೀಡಿದರು. ರೈತರಿಗೆ ಅತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿದರು’ ಎಂದು ರೈತ ಬಸವೇಗೌಡ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT