ಬುಧವಾರ, ಜನವರಿ 27, 2021
16 °C

ಸತತ ಐದು ಬಾರಿ ಗೆದ್ದ ನಾಲ್ವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಹೋಬಳಿಯ ಏಳು ಗ್ರಾಮ ಪಂಚಾಯಿತಿಗಳಲ್ಲಿ ನಾಲ್ವರು ಸತತವಾಗಿ ಐದು ಬಾರಿ ಮತ್ತು ಎಂಟು ಮಂದಿ ಸತತ ಮೂರು ಬಾರಿ ಗೆದ್ದಿದ್ದಾರೆ.

ಹೆಸರಘಟ್ಟ ಗ್ರಾಮದ ಅಶ್ವಥ್ ಬಿ., ಅಂಜನಾದೇವಿ, ಲೋಹಿತಾಶ್ವ, ಶ್ರೀನಿವಾಸಮೂರ್ತಿ ಸತತವಾಗಿ ಐದು ಬಾರಿ ಗೆಲುವು ಸಾಧಿಸಿದ್ದಾರೆ. ಗೋವಿಂದರಾಜು, ಪ್ರಭಾಕರ್, ಎಚ್.ಕೆ.ಪರಿಮಳ, ಸುನೀಲ್ ಕುಮಾರ್ ನಿರಂತರವಾಗಿ ಮೂರು ಬಾರಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎ.ಬಾಲರಾಜು ಹಾಗೂ ಹುರುಳಿಚಿಕ್ಕನಹಳ್ಳಿ ಗ್ರಾಮಪಂಚಾಯಿತಿಯ ತರಬನಹಳ್ಳಿ ಗ್ರಾಮದ ರೂಪಾ, ರಾಜಾನುಕುಂಟೆ ಗ್ರಾಮದ ಆರ್.ಎಚ್.ಹನುಮೇಗೌಡ, ಸೋಲದೇವನಹಳ್ಳಿ ಗ್ರಾಮದ ಟಿ.ವೆಂಕಟೇಶ್ ಮೂರ್ತಿ ಸತತವಾಗಿ ಮೂರು ಬಾರಿ ಜಯಶೀಲರಾಗಿರುವ ಸದಸ್ಯರು.

‘ಗ್ರಾಮಸ್ಥರಿಗೆ ಏನೇ ಸಂಕಷ್ಟ ಎದುರಾದರೂ, ಸದಸ್ಯರು ತಕ್ಷಣ ಸ್ಪಂದಿಸಬೇಕು. ಜನ ಮೂಲ ಸೌಲಭ್ಯಗಳನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಸರ್ಕಾರದ ಯೋಜನೆಗಳನ್ನು ಗ್ರಾಮದ ಜನರಿಗೆ ನಿರಂತರವಾಗಿ ತಲುಪಿಸಿದ್ದೇನೆ. ಈ ಕಾರಣಕ್ಕಾಗಿಯೇ ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿದರೂ ಗ್ರಾಮಸ್ಥರು ಗೆಲುವು ನೀಡಿದ್ದಾರೆ’ ಎನ್ನುತ್ತಾರೆ ಮೂರು ಬಾರಿ ಗ್ರಾಮದ ಬೇರೆ ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಿ‌ ವಿಜಯ ಸಾಧಿಸಿರುವ ಸೋಲದೇವನಹಳ್ಳಿ ಗ್ರಾಮದ ಟಿ.ವೆಂಕಟೇಶ್ ಮೂರ್ತಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು