ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಲಗ ಸಸ್ಯದ ವಾಣಿಜ್ಯ ತಳಿ ಅಭಿವೃದ್ಧಿ

Last Updated 31 ಅಕ್ಟೋಬರ್ 2019, 2:49 IST
ಅಕ್ಷರ ಗಾತ್ರ

ಹೆಸರಘಟ್ಟ: ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ವಿಜ್ಞಾನಿಗಳಾದ ರೋಹಿಣಿ ಮತ್ತು ಹಿಮಾಬಿಂದು ಅವರು ಒಂದೆಲಗ ಸಸ್ಯದ ‘ಅರ್ಕಾ ದಿವ್ಯ’ ಮತ್ತು ‘ಅರ್ಕಾ ಪ್ರಭಾವಿ’ ಎಂಬ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

‘ಅರ್ಕಾ ದಿವ್ಯ ಆಹಾರ ತಳಿಯಾದರೆ, ಪ್ರಭಾವಿ ಔಷಧಿ ತಳಿಯಾಗಿದೆ. ಆರ್ಯುವೇದ ಔಷಧಿಗಳ ತಯಾರಿಕೆಯಲ್ಲಿ ಈ ಸಸ್ಯವನ್ನು ಬಳಕೆ ಮಾಡುತ್ತಿರುವುದರಿಂದ ವಾಣಿಜ್ಯ ಬೆಲೆ ಕುದುರಿದೆ. ರೈತರಿಗೆ ಸರಾಗವಾಗಿ ಈ ಸಸ್ಯವು ಅದಾಯವನ್ನು ತರಬಲ್ಲದು’ ಎನ್ನುತ್ತಾರೆ ವಿಜ್ಞಾನಿ ರೋಹಿಣಿ ಅವರು.

‘ಒಂದೆಲಗವನ್ನು ತೆಂಗು ಮತ್ತು ಅಡಿಕೆ ಮರಗಳ ಮಧ್ಯ ಸಾಲಿನಲ್ಲಿ ಅಥವಾ ಏರು ಮಡಿಗಳನ್ನು ಮಾಡಿ ಬೆಳೆಯಬ
ಹುದು. 60 ದಿನಗಳ ಬೆಳೆ ಇದಾಗಿದ್ದು, ನಂತರ ಪ್ರತಿ 30 ದಿನಗಳೊಮ್ಮೆ ಎಲೆಗಳನ್ನು ಕೊಯ್ಯಬಹುದು. ಎಲೆಗಳನ್ನು ಕತ್ತರಿಸಿದ ನಂತರವೂ ಗಿಡವು ಸಮೃದ್ಧವಾಗಿ ಬೆಳೆಯುತ್ತದೆ. ಗಿಡವನ್ನು ಮಳೆಗಾಲದಲ್ಲಿ ನಾಟಿ ಮಾಡುವುದು ಒಳಿತು’ ಎಂದು ಹಿಮಾಬಿಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಎಂ.ಆರ್. ದಿನೇಶ್, ‘ನಮ್ಮ ಸಂಸ್ಥೆಯಲ್ಲಿ ಬೆಳೆದಿರುವ ಸಸ್ಯವನ್ನು ಎರಡು ಕಂಪನಿಗಳು ಖರೀದಿ ಮಾಡುತ್ತಿವೆ. ಒಣಗಿದ ಎಲೆಗಳಿಗೆ ಕೆ.ಜಿ.ಗೆ ₹100 ನೀಡಿದರೆ, ತಾಜಾ ಎಲೆಗಳಿಗೆ ₹25 ನೀಡುತ್ತಿವೆ. ಒಂದು ಎಕರೆ ಪ್ರದೇಶಕ್ಕೆ ನೂರು ಕೆ.ಜಿ.ಯಷ್ಟು ಸಾಮಗ್ರಿ ಬೇಕಾಗುತ್ತದೆ. ನೂರು ಕೆ.ಜಿ.ಯಲ್ಲಿ ಸಾವಿರ ಕೆ.ಜಿ. ಎಲೆಗಳನ್ನು ಬೆಳೆಯಬಹುದು’ ಎಂದರು.

ಮಾಹಿತಿಗೆ: 080-23086100/251

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT