ಬುಧವಾರ, ಸೆಪ್ಟೆಂಬರ್ 18, 2019
28 °C

ಉಗ್ರರು ನುಸುಳಿರುವ ಶಂಕೆ, ಬೆಂಗಳೂರಿನಲ್ಲಿ ಹೈ-ಅಲರ್ಟ್: ಪೊಲೀಸ್ ಅಧಿಕಾರಿಗಳ ಸಭೆ

Published:
Updated:

ಬೆಂಗಳೂರು: ಉಗ್ರರು ನುಸುಳಿರುವ ಶಂಕೆ ಹಿನ್ನಲೆಯಲ್ಲಿ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಮೆಜೆಸ್ಟಿಕ್ ಬಸ್ ನಿಲ್ದಾಣ,  ರೈಲು ನಿಲ್ದಾಣ, ಮಾಲ್ ಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಭದ್ರತೆ ಕುರಿತಂತೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಕಮಿಷನರ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು.

ಇದನ್ನೂ ಓದಿ... ಗುಪ್ತಚರ ಎಚ್ಚರಿಕೆ ರಾಜ್ಯದಲ್ಲಿ ಕಟ್ಟೆಚ್ಚರ

ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಡಿಸಿಪಿಗಳು, ಎಲ್ಲ ವಲಯಗಳ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆ ಕುರಿತು ಚರ್ಚೆ ನಡೆಸಿದರು.

ಹೈ ಅಲರ್ಟ್ ಘೋಷಣೆಯಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೈ ಅಲರ್ಟ್ ಬಗ್ಗೆ ಬಹಿರಂಗಪಡಿಸಿದ ಬಗ್ಗೆ ಪೊಲೀಸ್ ಅಧಿಕಾರಿಗಳ ಮೇಲೆ ಸಭೆಯಲ್ಲಿ ಕಮಿಷನರ್ ಗರಂ ಆಗಿದ್ದಾರೆ ಎನ್ನಲಾಗಿದೆ.

ಗೌಪ್ಯವಾಗಿಡಬೇಕಿದ್ದ ವಿಷಯಗಳನ್ನು ಬಹಿರಂಗಪಡಿಸಿದ್ದರಿಂದ ಜನ ಹೆಚ್ಚು ಭೀತಿಗೆ ಒಳಗಾಗಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.

ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರತಿ ಗಂಟೆಗೊಮ್ಮೆ ಮಾಹಿತಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಗೆ ಕಮಿಷನರ್ ಸೂಚಿಸಿದ್ದಾರೆ.

ಇನ್ನಷ್ಟು...

 ಬಸ್ ನಿಲ್ದಾಣ, ಮೆಟ್ರೊಗೆ ಬಿಗಿ ಭದ್ರತೆ

ಪೊಲೀಸ್‌ ಇಲಾಖೆ ಸ್ವಚ್ಛಗೊಳಿಸಬೇಕಿದೆ: ಪೊಲೀಸ್‌ ಕಮಿಷನರ್ ಭಾಸ್ಕರ್ ರಾವ್‌

Post Comments (+)