ಮಾಡೋ ಕೆಲ್ಸ ಬಿಟ್ಟು ಜಯಂತಿ ಆಚರಣೆ : ಹೈಕೋರ್ಟ್‌ ಬೇಸರ

7

ಮಾಡೋ ಕೆಲ್ಸ ಬಿಟ್ಟು ಜಯಂತಿ ಆಚರಣೆ : ಹೈಕೋರ್ಟ್‌ ಬೇಸರ

Published:
Updated:
Deccan Herald

ಬೆಂಗಳೂರು: ‘ದೇಶವೇ ಹಾಳಾಗ್ತಾ ಇದ್ರೆ ಅಧಿಕಾರಿಗಳು ಜಯಂತಿಗಳ ಆಚರಣೆಯಲ್ಲಿ ಮುಳುಗಿದ್ದಾರೆ’ ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

ವಾಣಿಜ್ಯ ಮಳಿಗೆ ಹರಾಜು ತಕರಾರಿನ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

‘ದಕ್ಷಿಣ ವಿಭಾಗದ ಜಂಟಿ ಆಯುಕ್ತರು ಹಾಜರಿರುವಂತೆ ಆದೇಶಿಸಿದ್ದರೂ ಏಕೆ ಬಂದಿಲ್ಲ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ವಕೀಲರು, ‘ಸ್ವಾಮಿ, ಅವರು ಕೆಂಪೇಗೌಡ ಜಯಂತಿ ಆಚರಣೆಯ ಸಿದ್ಧತೆಯಲ್ಲಿದ್ದಾರೆ’ ಎಂದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ವೀರಪ್ಪ, ‘ಇಂತಹ ಜಯಂತಿಗಳ ಆಚರಣೆ ಅರ್ಥ ಕಳೆದುಕೊಂಡಿವೆ. ಇವೆಲ್ಲಾ ನಮಗೆ ಬೇಕಾಗಿದೆಯೇ, ನಾವು ಮಾಡೊ ಕೆಲ್ಸ ಬಿಟ್ಟು ಇವುಗಳನ್ನೇ ಮಾಡುತ್ತಿದ್ದೇವೆ’ ಎಂದು ಕಿಡಿ ಕಾರಿದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !