ಎರಡು ಪ್ರತ್ಯೇಕ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ 

7

ಎರಡು ಪ್ರತ್ಯೇಕ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ 

Published:
Updated:

ಬೆಂಗಳೂರು: ಎರಡು ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಬಿ‌.ಎ.ಪಾಟೀಲ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ವಿಶೇಷ ನ್ಯಾಯಪೀಠ ಶನಿವಾರ ಈ ಕುರಿತ ಪ್ರಕರಣಗಳನ್ನು ವಿಚಾರಣೆ ನಡೆಸಿತು.

ವಿಶೇಷ ಎಂದರೆ ಈ ಪ್ರಕರಣದಲ್ಲಿ ಆರೋಪಿಗಳ ಮೇಲ್ಮನವಿಯನ್ನು ರಾಜ್ಯ ಕಾನೂನು ಸೇವೆಗಳ ನೆರವಿನ ಪ್ರಾಧಿಕಾರದ ಮುಖಾಂತರ ಸಲ್ಲಿಸಲಾಗಿತ್ತು.

‘ಉಚಿತ ಕಾನೂನು ನೆರವಿನ ಅಡಿಯಲ್ಲಿ ಬಡವರೂ ಹೈಕೋರ್ಟ್ನಲ್ಲಿ ನ್ಯಾಯ ಪಡೆಯಬಹುದು ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ’ ಎಂಬುದು ಮೇಲ್ಮನವಿಯಲ್ಲಿ ಆರೋಪಿಗಳ ಪರ ಹಾಗೂ ಪ್ರಾಧಿಕಾರದಿಂದ ಹಾಜರಾಗಿ ವಾದ ಮಂಡಿಸಿದ ವಕೀಲ ಅರುಣ ಶ್ಯಾಮ್ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !