ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಕೋರ್ಟ್‌ ಪ್ರತ್ಯೇಕಗೊಳಿಸಿ: ಸಲಹೆ

Last Updated 22 ಜನವರಿ 2020, 21:24 IST
ಅಕ್ಷರ ಗಾತ್ರ

ಬೆಂಗಳೂರು: ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012’ (ಪೋಕ್ಸೊ) ಕೋರ್ಟ್‌ಗಳನ್ನು ವಿಚಾರಣಾ ಕೋರ್ಟ್‌ ಕಟ್ಟಡಗಳ ಸಮುಚ್ಛಯದಿಂದ ಪ್ರತ್ಯೇಕಗೊಳಿಸಿದರೆ ಸೂಕ್ತ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯ
ಮೂರ್ತಿ ಅಭಯ್‌ ಎಸ್.ಓಕಾ ಅವರು ಮಂಗಳವಾರ ಈ ಕುರಿತಂತೆ ಸರ್ಕಾರಿ ವಕೀಲರಿಗೆ ಮೌಖಿಕ ಸಲಹೆ ನೀಡಿದರು.

‘ಪೋಕ್ಸೊ ವಿಶೇಷ ಕೋರ್ಟ್‌ಗಳೂ ಇತರೆ ನ್ಯಾಯಾಲಯಗಳ ಕಟ್ಟಡ ಸಮುಚ್ಛಯಗಳಲ್ಲೇ ಕೆಲಸ ಮಾಡುತ್ತಿವೆ. ಬೆಂಗಳೂರು ನಗರದ ಪೋಕ್ಸೊ ಕೋರ್ಟ್ ಕೂಡಾ ಸಿಟಿ ಸಿವಿಲ್ ಕೋರ್ಟ್ ಸಮುಚ್ಛಯದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಇದೇ ಪರಿಸ್ಥಿತಿ ರಾಜ್ಯದ ಇತರೆ ಜಿಲ್ಲೆ
ಗಳಲ್ಲಿಯೂ ಇದೆ. ಆದ್ದರಿಂದ ಇವುಗಳನ್ನು ಪ್ರತ್ಯೇಕಗೊಳಿಸುವುದು ಸೂಕ್ತ. ಸಂತ್ರಸ್ತ ಮಕ್ಕಳು ಮುಜುಗರ ಅನುಭವಿಸುವುದು ತಪ್ಪುತ್ತದೆ’ ಎಂದು ಓಕಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT