ಜಾಹೀರಾತು ಫಲಕ ನೇತುಹಾಕುವ ಆಧಾರಕಂಬಗಳ ತೆರವಿಗೆ ಹೈಕೋರ್ಟ್ ತಡೆ

7

ಜಾಹೀರಾತು ಫಲಕ ನೇತುಹಾಕುವ ಆಧಾರಕಂಬಗಳ ತೆರವಿಗೆ ಹೈಕೋರ್ಟ್ ತಡೆ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಸ್ಥಳಗಳಲ್ಲಿನ ಜಾಹೀರಾತು ಫಲಕಗಳನ್ನು ನೇತುಹಾಕುವ ಆಧಾರಕಂಬ ಅಥವಾ ರಚನೆಗಳ (ಸ್ಟ್ರಕ್ಚರ್ಸ್) ತೆರವಿಗೆ ಮುಂದಾಗದಂತೆ ಹೈಕೋರ್ಟ್ ತಡೆ ನೀಡಿದೆ.

ಈ ಕುರಿತಂತೆ ನಗರದ ಎಲಿಕ್ಸಿರ್ ಜಾಹೀರಾತು ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ಜಾಹೀರಾತು ಫಲಕಗಳನ್ನು ನೇತುಹಾಕಲು ಆಧಾರವಾಗಿರುವ ಸ್ಟ್ರಕ್ಚರ್ಸ್ ಗಳನ್ನು ತೆಗೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಬಿಬಿಎಂಪಿ ಅವುಗಳ ತಂಟೆಗೆ ಹೋಗದಂತೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಸಾರ್ವಜನಿಕರ ಆರೋಗ್ಯ ಹಾಗೂ ಜೀವರಕ್ಷಣೆ ದೃಷ್ಟಿಯಿಂದ ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ ಅನುಸಾರ ಇಂತಹ ಸ್ಟಕ್ಚರ್ ಗಳನ್ನು ತೆಗೆಯಲು ಬಿಬಿಎಂಪಿಗೆ ಎಲ್ಲ ಅಧಿಕಾರವಿದೆ’ ಎಂದರು.

’ನಗರದ ಸೌಂದರ್ಯ ವೃದ್ಧಿಗೆ ಮತ್ತು ಕಾನೂನುಬಾಹಿರ ಜಾಹೀರಾತುಗಳನ್ನು ತೆರವುಗೊಳಿಸುವ ದಿಸೆಯಲ್ಲಿ ಬಿಬಿಎಂಪಿ ಕಾರ್ಯ ಪ್ರವೃತ್ತವಾಗಿದೆ’ ಎಂದು ಪ್ರತಿಪಾದಿಸಿದರು.

ವಿಚಾರಣೆಯನ್ನು ಇದೇ 17 ಕ್ಕೆ ಮುಂದೂಡಲಾಗಿದೆ. ಈ ಆದೇಶ ಅರ್ಜಿದಾರ ಕಂಪನಿಗೆ ಮಾತ್ರವೇ ಅನ್ವಯ ಆಗಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !