ಕೈಕೊಟ್ಟ ಹುಡುಗಿ; ಯುವಕನ ರಂಪಾಟ

7

ಕೈಕೊಟ್ಟ ಹುಡುಗಿ; ಯುವಕನ ರಂಪಾಟ

Published:
Updated:
Deccan Herald

ಬೆಂಗಳೂರು: ‘ಹುಡುಗಿಯೊಬ್ಬಳು ನನಗೆ ಮೋಸ ಮಾಡಿದ್ದಾಳೆ. ನನ್ನನ್ನು ಸಾಯಲು ಬಿಡಿ’ ಎಂದು ಕೂಗಾಡುತ್ತಿದ್ದ ಯುವಕನೊಬ್ಬ ಯಶವಂತಪುರದಲ್ಲಿ ಶನಿವಾರ ರಂಪಾಟ ಮಾಡಿದ.

ಪಾನಮತ್ತನಾಗಿದ್ದ ಯುವಕ, ನಡುರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಓಡಾಡಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿದ. ಕೆಲವು ವಾಹನಗಳ ಚಕ್ರದ ಕೆಳಗೆ ಮಲಗಿ ಆತ್ಮಹತ್ಯೆಗೂ ಯತ್ನಿಸಿದ. ಸ್ಥಳದಲ್ಲಿದ್ದ ಸಂಚಾರ ಪೊಲೀಸರು, ಆತನನ್ನು ಹಿಡಿದುಕೊಳ್ಳಲು ಹರಸಾಹಸಪಟ್ಟರು.

‘ನಾನು, ಬಲೂನ್ ಮಾರಾಟಗಾರ. ಕೆಲವು ವರ್ಷಗಳ ಹಿಂದೆ ಪರಿಚಯವಾಗಿದ್ದ ಹುಡುಗಿ, ಈಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಹಣವನ್ನೂ ಕಿತ್ತೊಯ್ದಿದ್ದಾಳೆ’ ಎನ್ನುತ್ತಿದ್ದ ಆತ, ರಸ್ತೆಯಲ್ಲೇ ಮಲಗಿದ್ದ. ನಿಯಂತ್ರಣ ಕೊಠಡಿಗೆ ಕರೆ ಮಾಡಿ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು, ಆತನನ್ನು ಠಾಣೆಗೆ ಕರೆದೊಯ್ದರು. 

ಈ ಘಟನೆಯನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !