ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಪುರ–ಪೆನುಕೊಂಡ ರೈಲು ಸಂಚಾರ ವ್ಯತ್ಯಯ: ಅನುಪ್‌ ದಯಾನಂದ ಸಾಧು

Last Updated 22 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ನೈರುತ್ಯ ರೈಲ್ವೆಯ ಯಲಹಂಕ–ಪೆನುಕೊಂಡ ವಿಭಾಗದ ಮಾರ್ಗದಲ್ಲಿ ದ್ವಿಪಥಗೊಳಿಸುವಿಕೆ ಹಾಗೂ ವಿದ್ಯುದ್ದೀಕರಣ ಕೆಲಸ ಕೈಗೆತ್ತಿಕೊಂಡಿರುವುದರಿಂದ ಮಾ.29ರವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ’ ಎಂದು ನೈರುತ್ಯ ರೈಲ್ವೆಯಪ್ರಯಾಣಿಕರ ಸೌಕರ್ಯಗಳ ವಿಭಾಗದಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನುಪ್‌ ದಯಾನಂದ ಸಾಧು ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಯಲಹಂಕದಿಂದ ಹಿಂದೂಪುರದವರೆಗೆ ಈಗಾಗಲೇ ಕೆಲಸಗಳು ಪೂರ್ಣಗೊಂಡಿವೆ. ಈಗ ಹಿಂದೂಪುರದಿಂದ ಪೆನುಕೊಂಡವರೆಗೆ ಸುಮಾರು 37 ಕಿ.ಮೀವರೆಗೆದ್ವಿಪಥಗೊಳಿಸುವಿಕೆ ಹಾಗೂ ವಿದ್ಯುದ್ದೀಕರಣ ಕೆಲಸಗಳನ್ನು ಆರಂಭಿಸಿದ್ದೇವೆ’ ಎಂದರು.

‘ನಿಗದಿತ ಅವಧಿಯವರೆಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲ ರೈಲು ಸಂಚಾರ ಪೂರ್ಣವಾಗಿ ರದ್ದು ಮಾಡಲಾಗಿದ್ದು, ಪ್ರಯಾಣಿಕರಿಗೆ ಅಡಚಣೆಯಾಗದಂತೆ ಪರ್ಯಾಯ ರೈಲುಗಳ ಸೇವೆಯೊಂದಿಗೆ ಬದಲಿ ಮಾರ್ಗಗಳನ್ನೂ ಸೂಚಿಸಲಾಗಿದೆ’ ಎಂದು ಹೇಳಿದರು.

‘ಯಲಹಂಕ–ಪೆನುಕೊಂಡ ವಿಭಾಗವು ಬೆಂಗಳೂರನ್ನು ತೆಲಂಗಾಣದೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗ. ದ್ವಿಪಥಗೊಳಿಸುವಿಕೆ ಕಾರ್ಯ ಪೂರ್ಣಗೊಂಡ ನಂತರ ಈ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ರೈಲುಗಳ ಸಂಚಾರಕ್ಕೆ ಅನುಕೂಲವಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT