ಬೆಂಗಳೂರು: ‘ಬಾಲ್ಯದಲ್ಲಿ ಒಂದು ರೀತಿಯ ಶಿಕ್ಷೆಯಂತಾಗಿದ್ದ ಸಂಗೀತಾಭ್ಯಾಸ, ಕಾಲೇಜು ದಿನಗಳಲ್ಲಿ ನನ್ನ ಜೀವನಕ್ಕೆ ಅನಿವಾರ್ಯ ಎನಿಸಿತು. ಇದರಿಂದಾಗಿ ಸಂಗೀತ ಕ್ಷೇತ್ರದಲ್ಲಿ ಕಲಿಕೆಯ ಹಸಿವು ಜಾಸ್ತಿಯಾಯಿತು. ಸ್ವವಿಮರ್ಶೆಯ ಸ್ವಭಾವ ನನ್ನ ಬೆಳವಣಿಗೆಗೆ ಸಹಕಾರಿಯಾಯಿತು...’

ಹೀಗೆ ಸಂಗೀತ ಕ್ಷೇತ್ರದಲ್ಲಿನ ತಮ್ಮ ಪಯಣವನ್ನು ಸ್ಮರಿಸಿಕೊಂಡವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ ಪರಮೇಶ್ವರ ಹೆಗಡೆ. ಅವರ 70ನೇ ವರ್ಷದ ಜನ್ಮದಿನದ ಪ್ರಯುಕ್ತ ಅವರ ಶಿಷ್ಯರು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವರ ಸಪ್ತತಿ’ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ, ಮಾತನಾಡಿದರು.

‘62 ವರ್ಷಗಳಿಂದ ಸಂಗೀತದ ನಂಟನ್ನು ಹೊಂದಿದ್ದೇನೆ. 8ನೇ ವರ್ಷವಿರುವಾಗಲೇ ಅಪ್ಪನ ಆಸೆಯಂತೆ ನಾನು ಸಂಗೀತಾಭ್ಯಾಸ ಪ್ರಾರಂಭಿಸಿದೆ. ಪಂಡಿತ್ ಎಸ್.ಎಂ. ಭಟ್ ಕಟ್ಟಿಗೆ, ಚಂದ್ರಶೇಖರ್ ಪುರಾಣಿಕಮಠ ಅವರ ಬಳಿ ಸಂಗೀತಾಭ್ಯಾಸ ಮಾಡಿದೆ. ಸಂಗೀತ ದಿಗ್ಗಜ ಬಸವರಾಜ ರಾಜಗುರು ಅವರು ನನ್ನ ಸಂಗೀತ ಬದುಕಿಗೆ ಹೊಸ ತಿರುವು ನೀಡಿದರು’ ಎಂದರು.

‘ಶಾಸ್ತ್ರೀಯ ಸಂಗೀತ ಕಬ್ಬಿಣದ ಕಡಲೆಯೆಂದು ವರ್ಣಿಸುತ್ತಾರೆ. ಶಾಸ್ತ್ರ ಸಂಗೀತವನ್ನು ಕಟ್ಟಿಹಾಕಲಿಕ್ಕಲ್ಲ, ಕಾಯಲು ಇದೆ. ಅದನ್ನು ತಿಳಿದುಕೊಳ್ಳಬೇಕು. ಸಂಗೀತದಲ್ಲಿ ಸದಾ ಹೊಸ ಹೊಸ ಪ್ರಯೋಗ, ಹುಡುಕಾಟದಲ್ಲಿ ಇರುತ್ತೇನೆ’ ಎಂದು ಹೇಳಿದರು.

ಹಿಂದೂಸ್ತಾನಿ ಗಾಯಕ ವಿನಾಯಕ ತೊರವಿ, ‘ಹಿಂದಿನ ಕಾಲದಲ್ಲಿ ಸಂಗೀತ ಕಲಿಕೆಗೆ ಕಠಿಣ ಪರಿಶ್ರಮ ಅಗತ್ಯವಾಗಿತ್ತು. ಅಷ್ಟೇ ಭಯ ಭಕ್ತಿಯಿಂದ ಗುರುವನ್ನು ಕಾಣುತ್ತಿದ್ದೇವು. ಗುರು–ಶಿಷ್ಯರ ಸಂಬಂಧ ವಿಶಿಷ್ಟವಾದದ್ದು’ ಎಂದು ಸ್ಮರಿಸಿಕೊಂಡರು.

ಕತೆಗಾರ ಎಸ್. ದಿವಾಕರ್, ‘ನಾದ ಭಾಷೆಯು ಮಾತಿನ ಅರ್ಥಕ್ಕೆ ಮೀರಿದೆ. ಅದು ಹೃದಯದ ಜತೆಗೆ ಮಾತನಾಡಲಿದೆ. ಪ್ರಪಂಚಕ್ಕೆ ಭಾರತ ನೀಡಿದ ನಿಜವಾದ ಕೊಡುಗೆ ಸಂಗೀತ’ ಎಂದರು.

ಮಾಜಿ ಸಚಿವ ಕುಮಾರ್ ಬಂಗಾರಪ್ಪ, ‘ತಂದೆ ಅವರಿಗೆ ನನ್ನನ್ನು ಸಂಗೀತಗಾರನನ್ನಾಗಿ ಮಾಡಬೇಕೆಂಬ ಕನಸಿತ್ತು. ಹಾಗಾಗಿ, ನಾನು ಪ್ರೌಢಶಾಲಾ ದಿನಗಳಲ್ಲಿಯೇ ಸಂಗೀತ ಕಲಿಕೆಗೆ ತೊಡಗಿದೆ. ಪರಮೇಶ್ವರ ಹೆಗಡೆ ಅವರ ಬಳಿಯೂ ಕಲಿತೆ. ಈಗಿನ ಡಿಜಿಟಲ್ ಯುಗದಲ್ಲಿ ಚಿತ್ರಗೀತೆಗಳನ್ನು ತುಂಡರಿಸುತ್ತಾ ಬರಲಾಗಿದೆ. ಶುದ್ಧ ಸಂಗೀತಕ್ಕೆ ಮತ್ತೆ ಆದ್ಯತೆ ದೊರೆಯುವಂತಾಗಬೇಕು’ ಎಂದು ಹೇಳಿದರು.

ತಬಲಾ ವಾದಕ ರವೀಂದ್ರ ಯಾವಗಲ್ ಹಾಗೂ ಗಾಯಕ ನಾಗರಾಜರಾವ್ ಹವಾಲ್ದಾರ್ ಅವರು ಪರಮೇಶ್ವರ ಹೆಗಡೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ದತ್ತಾತ್ರೇಯ ವೆಲಂಕರ್ ಅವರ ‘ಗಾನ ತಪಸ್ವಿ–ಪಂಡಿತ್ ಪರಮೇಶ್ವರ ಹೆಗಡೆ’ ಪುಸ್ತಕ ಜನಾರ್ಪಣೆ ಮಾಡಲಾಯಿತು. ಬಳಿಕ ಶುಭಾ ಮುದ್ಗಲ್ ಮತ್ತು ತಂಡದಿಂದ ಸಂಗೀತ ಕಛೇರಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.