ಜಾಹೀರಾತು ಚೌಕಟ್ಟು ತೆರವು– ಮಾತಿನ ಚಕಮಕಿ

7

ಜಾಹೀರಾತು ಚೌಕಟ್ಟು ತೆರವು– ಮಾತಿನ ಚಕಮಕಿ

Published:
Updated:
Deccan Herald

ಬೆಂಗಳೂರು: ನಗರದ ಎಂ.ಜಿ.ರಸ್ತೆಯ ಶೃಂಗಾರ್‌ ಕಾಂಪ್ಲೆಕ್ಸ್‌ ಕಟ್ಟಡದ ಮೇಲೆ ಜಾಹೀರಾತು ಪ್ರದರ್ಶನಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ತೆರವಿನ ವೇಳೆ ಪಾಲಿಕೆ ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಬುಧವಾರ ಮಾತಿನ ಚಕಮಕಿ ನಡೆಯಿತು.

‘ಚೌಕಟ್ಟು ತೆರವುಗೊಳಿಸುವ ಬಗ್ಗೆ ಮೊದಲೇ ಮಾಹಿತಿಯನ್ನೇಕೆ ನೀಡಿಲ್ಲ’ ಎಂದು ಕಟ್ಟಡ ಮಾಲೀಕರು ಪ್ರಶ್ನಿಸಿದರು. 

‘ಹೈಕೋರ್ಟ್‌ ಸೂಚನೆ ಮೇರೆಗೆ ನಾವು ತೆರವು ಕಾರ್ಯ ನಡೆಸುತ್ತಿದ್ದೇವೆ’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಪರಿಸ್ಥಿತಿ ಹದ್ದು ಮೀರುವ ಲಕ್ಷಣ ಕಂಡು ಬಂದಿದ್ದರಿಂದ ಪೊಲೀಸರನ್ನು ಸ್ಥಳಕ್ಕೆ ಕರೆಸಿ ತೆರವು ಕಾರ್ಯ ಮುಂದುವರಿಸಿದರು.

‘ಪಾಲಿಕೆ ಅನುಮತಿ ಪಡೆಯದೆ ಅಳವಡಿಸಿರುವ ಎಲ್ಲ ಚೌಕಟ್ಟುಗಳನ್ನು ತೆರವುಗೊಳಿಸುತ್ತೇವೆ’ ಎಂದು ಶಾಂತಿನಗರದ ಸಹಾಯಕ ಕಂದಾಯ ಅಧಿಕಾರಿ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತೆರವು ಕಾರ್ಯಾಚರಣೆಗೆ ಭಾರಿ ಗಾತ್ರದ ಕ್ರೇನ್‌ ತರಿಸಲಾಗಿತ್ತು. ಇದನ್ನು ಎಂ.ಜಿ.ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ವಾಹನ ಸವಾರರಿಗೆ ಅನನುಕೂಲ ಉಂಟಾಯಿತು. ಕ್ರೇನ್‌ ಓಡಾಟದಿಂದಾಗಿ ಪಾದಚಾರಿಗಳೂ ಸಮಸ್ಯೆ ಎದುರಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !