ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆ ಸೋಗಿನಲ್ಲಿ ಹನಿಟ್ರ್ಯಾಪ್

ಜಾಲತಾಣದಲ್ಲಿ ಜಾಹೀರಾತು ನೀಡುತ್ತಿದ್ದ ಆರೋಪಿ ದಂಪತಿ ಸೆರೆ
Last Updated 4 ಫೆಬ್ರುವರಿ 2021, 19:56 IST
ಅಕ್ಷರ ಗಾತ್ರ

ಬೆಂಗಳೂರು: ವೇಶ್ಯಾವಾಟಿಕೆ ಸೋಗಿನಲ್ಲಿ ಹನಿಟ್ರ್ಯಾಪ್‌ ಮಾಡಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

‘ಉಲ್ಲಾಳ ಉಪನಗರ ಸಮೀಪದ ವಿಶ್ವೇಶ್ವರ ಲೇಔಟ್‌ನ ಭಾಸ್ವತಿ ದತ್ತಾ (29) ಹಾಗೂ ಆಕೆಯ ಪತಿ ಕಿರಣ್ ರಾಜ್ (33) ಬಂಧಿತರು. ಅವರ ಮೊಬೈಲ್ ಹಾಗೂ ಡೈರಿಯೊಂದನ್ನು ಜಪ್ತಿ ಮಾಡಲಾಗಿದೆ. ಜಾಲದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ನಾಗಮಂಗಲದ ಕಿರಣ್ ರಾಜ್ ಹಾಗೂ ಭಾಸ್ವತಿ ಅವರಿಗೆ 2018ರಲ್ಲಿ ಮದುವೆಯಾಗಿತ್ತು. ಸುಲಭವಾಗಿ ಹಣ ಸಂಪಾದನೆ ಮಾಡಲು ಆರೋಪಿಗಳು, ಹನಿಟ್ರ್ಯಾಪ್‌ಗೆ ಇಳಿದಿದ್ದರು. ಅವರ ಕೃತ್ಯದಿಂದ ನೊಂದ ಸಂತ್ರಸ್ತರು ದೂರು ನೀಡಿದ್ದರು’ ಎಂದೂ ತಿಳಿಸಿದರು.

ಜಾಲತಾಣದಲ್ಲಿ ಜಾಹೀರಾತು: ‘ಯುವತಿಯರು ಇದ್ದಾರೆ. ಹೇಳಿದ ಸ್ಥಳಕ್ಕೆ ಕಳುಹಿಸಲಾಗುವುದು’ ಎಂದು ಆರೋಪಿಗಳು, ಯುವತಿಯರ ಫೋಟೊ ಹಾಗೂ ಮೊಬೈಲ್ ನಂಬರ್ ಸಮೇತ ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿದ್ದರು. ತಮ್ಮನ್ನು ಸಂಪರ್ಕಿಸುತ್ತಿದ್ದ ಗ್ರಾಹಕರನ್ನು ಬಲೆಗೆ ಬೀಳಿಸುತ್ತಿದ್ದ ಆರೋಪಿಗಳು, ಹಲವು ಯುವತಿಯರ ಫೋಟೊ ಹಾಗೂ ದರದ ಪಟ್ಟಿ ಕಳುಹಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಹಣ ನೀಡಲು ಗ್ರಾಹಕರು ಒಪ್ಪಿಗೆ ಸೂಚಿಸುತ್ತಿದ್ದಂತೆ ಆರೋಪಿ ಭಾಸ್ವತಿಯೇ ಸ್ಥಳಕ್ಕೆ ಹೋಗುತ್ತಿದ್ದಳು. ಗ್ರಾಹಕರ
ಜೊತೆ ಖಾಸಗಿ ಕ್ಷಣಗಳನ್ನು ಕಳೆದು, ಕೊನೆಯಲ್ಲಿ ಗಲಾಟೆ ಮಾಡುತ್ತಿದ್ದಳು. ಅತ್ಯಾಚಾರ ಮಾಡಿದ್ದಿಯಾ ಎಂದು ಕೂಗಾಡಿ ಗ್ರಾಹಕರನ್ನು
ಬೆದರಿಸುತ್ತಿದ್ದಳು. ಪೊಲೀಸರಿಗೆ ದೂರು ಕೊಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಹಾಗೂ ಚಿನ್ನ ಸುಲಿಗೆ ಮಾಡುತ್ತಿದ್ದಳು.
ಇದೇ ರೀತಿಯಲ್ಲೇ ವೈಟ್‌ಫೀಲ್ಡ್ ನಿವಾಸಿಯೊಬ್ಬರಿಂದ, ₹ 94 ಸಾವಿರ ಹಾಗೂ 150 ಗ್ರಾಂ ಚಿನ್ನ ಕಿತ್ತುಕೊಂಡು ಪರಾರಿಯಾಗಿದ್ದಳು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT