ಕೆ.ಆರ್.ಪುರ: ಹೂಡಿ ಗ್ರಾಮದಲ್ಲಿ ಶ್ರೀಲಕ್ಷ್ಮಿನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆ, ಭಕ್ತಿಭಾವದಿಂದ ನೆರವೇರಿತು.

ಬ್ರಹ್ಮ ರಥೋತ್ಸವದ ಅಂಗವಾಗಿ ಗುರುವಾರ ಸಂಜೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆಗಳು, ಹೋಮ-ಹವನಗಳು ನಡೆದವು. ಉತ್ಸವ ಮೂರ್ತಿಗೆ ವಿವಿಧ ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು,

ಭಕ್ತರ ಜಯಘೋಷಗಳ ಮಧ್ಯೆ ದೇವರನ್ನು ಅಲಂಕೃತ ರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಥದ ಮುಂದೆ ಸಿಂಗಾರಗೊಂಡ ಎತ್ತುಗಳ ಬಂಡಿ, ಗಾರುಡಿ ಗೊಂಬೆ ನೃತ್ಯ, ಡೊಳ್ಳು ಕುಣಿತ, ತಮಟೆ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನಗಳು ಸೂರೆಗೊಂಡವು.

ಹೂಡಿ, ತಿಗಳರಪಾಳ್ಯ, ರಾಜಪಾಳ್ಯ, ಅಯ್ಯಪ್ಪನಗರ, ಕಾವೇರಿ ನಗರ, ಗರುಡಾಚಾರ್ ಪಾಳ್ಯ, ಮಹದೇವಪುರ ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ವಿಶೇಷವಾಗಿ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮತ್ತಷ್ಟು ಚೈತನ್ಯ ತುಂಬಿದರು. ಭಕ್ತರಿಗಾಗಿ ಅನ್ನದಾಸೋಹ, ಪಾನಕ ಹಾಗೂ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ಮಹದೇವಪುರ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಎಚ್.ಎಸ್.ಪಿಳ್ಳಪ್ಪ, ಎಚ್.ಡಿ ಶ್ರೀನಿವಾಸ್ ರೆಡ್ಡಿ ಎಚ್.ವಿ.ಮಂಜುನಾಥ್, ಎಚ್.ಬಿ.ಅನೂಪ್ ಕುಮಾರ್, ವಿಶ್ವನಾಥ್, ಎಚ್.ಎನ್.ಮೋಹನ್, ಎಚ್.ಎಸ್. ನರೇಂದ್ರಬಾಬು, ಎಚ್.ಜೆ ಮಹೇಂದ್ರ ಬಾಬು, ಎಲ್.ಟಿ.ಶ್ರೀನಿವಾಸ್, ಎಚ್.ಎಸ್.ಪವನ್ ರೆಡ್ಡಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-4-722366528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.