ಭಾನುವಾರ, ನವೆಂಬರ್ 17, 2019
21 °C

ಹುಕ್ಕಾ ಬಾರ್‌ಗೆ ದಾಳಿ: ಯುವಕನ ಬಂಧನ

Published:
Updated:

ಬೆಂಗಳೂರು: ಕಾನೂನುಬಾಹಿರವಾಗಿ ಹುಕ್ಕಾ ಪಾರ್ಲರ್‌ಗಳನ್ನು ತೆರೆದು, ಹುಕ್ಕಾ ಸೇದಲು ಪ್ರಚೋದಿಸುತ್ತಿದ್ದ ಕೋಡಿಹಳ್ಳಿ ನಿವಾಸಿ ಸುಮಂತ್‌ (29) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲ ಠಾಣಾ ವ್ಯಾಪ್ತಿಯ ಆರನೇ ಬ್ಲ್ಯಾಕ್‌ನಲ್ಲಿ ‘ಅಂಕಲ್‌ ಜಾನಿ ಕೆಫೆ’ ಹೆಸರಿನಲ್ಲಿ ಸುಮಂತ್‌ ಹುಕ್ಕಾ ಬಾರ್‌ಗಳನ್ನು ತೆರೆದು, ಹುಕ್ಕಾ ಸೇದಲು ಪ್ರಚೋದಿಸುತ್ತಿದ್ದರು.

₹ 70,668 ವಶ: ಇನ್ನೊಂದು ಪ್ರಕರಣದಲ್ಲಿ ಹಳೆ ಮದ್ರಾಸ್‌ ರಸ್ತೆಯ ಸುಭಾಷ್‌ ನಗರದಲ್ಲಿ ಎಂ.ಎಂ. ರಿಕ್ರಿಯೇ
ಷನ್ಸ್‌ ಅಸೋಸಿಯೇಷನ್‌ ಕ್ಲಬ್‌ಗೆ ಸಿಸಿಬಿ ದಾಳಿ ಮಾಡಿ ಕ್ಯಾಷಿಯರ್‌ ಸೇರಿ 16 ಮಂದಿಯನ್ನು ಬಂಧಿಸಿ ₹ 0,668 ವಶಪಡಿಸಿಕೊಂಡಿದೆ. ಕೆ.ಆರ್‌. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)