ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೆರೆಹಳ್ಳಿ ಕೆರೆ ಬಳಿ ತ್ಯಾಜ್ಯ ನಿರ್ವಹಣೆ ಅರಿವು

Last Updated 6 ಅಕ್ಟೋಬರ್ 2022, 20:58 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಯ ಸುತ್ತಮುತ್ತ ತ್ಯಾಜ್ಯ ನಿರ್ವಹಣೆ ಕುರಿತು ಸಿಟಿಜನ್ ಎಂಗೇಜ್‌ಮೆಂಟ್‌ ಪ್ಲಾಟ್‌ ಫಾರ್ಮ್‌ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವುದು ಮತ್ತು ಕಸ ಸಂಗ್ರ ಹಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿಗೆ ಸಹಾಯ ಮಾಡಲು ಜಾಗೃತಿ ಮೂಡಿಸಲಾಯಿತು.

ಬಿ.ಎಂ. ಶ್ರೀನಿವಾಸಯ್ಯ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಹೊಸಕೆರೆಹಳ್ಳಿ ಕೆರೆಯನ್ನು ಸ್ವಚ್ಛ ವಾಗಿಡಲು ಮತ್ತು ಕಸ ಸೇರದಂತೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿ ಯಾಗಲು 29 ಜನರು ‘ನಮ್ಮ ಕ್ಲೀನ್ ಬೆಂಗಳೂರು’ ವೆಬ್‌ಸೈಟ್‌ನಲ್ಲಿ (ಸಿಟಿಜನ್ ಎಂಗೇಜ್ಮೆಂಟ್ ಪ್ಲಾಟ್‌ಫಾರ್ಮ್‌) ನೋಂದಾಯಿಸಿಕೊಂಡಿದ್ದರು. ಅವರಿಗೆ ಎಲ್ಲ ಮಾಹಿತಿ ನೀಡಲಾಗಿದೆ. ನಗರದಲ್ಲಿ ಕಸ ಪ್ರಮುಖ ಸಮಸ್ಯೆಯಾಗಿದೆ. ಇತ್ತೀ ಚಿನ ಅಧ್ಯಯನದ ಪ್ರಕಾರ ನಗರದಲ್ಲಿ ಕಸ ಸುಡುವ ಪ್ರಕ್ರಿಯೆಯಿಂದ ಮಾಲಿ ನ್ಯಕ್ಕೆ ಶೇ 16.1ರಷ್ಟು ಕಾರಕಗಳು ಸೇರುತ್ತಿವೆ. ಭವಿಷ್ಯದಲ್ಲಿ ಸುರಕ್ಷಿತ ಮತ್ತು ಸ್ವಚ್ಛ ನಗರಗಳನ್ನು ರಚಿಸಲು ಬಿಬಿಎಂಪಿಯೊಂದಿಗೆ ಕೈಜೋಡಿಸುವ ನಾಗರಿಕರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಅರಿವು ಮೂಡಿಸಲಾಗುತ್ತದೆ’ ಎಂದು jhatkaa.orgಯ ಚಿಕು ಅಗರ್‌ವಾಲ್‌ ಹೇಳಿದರು.

‘ಕ್ಲೀನ್ ಬೆಂಗಳೂರು ಮೈಕ್ರೋಸೈಟ್ ಮೂಲಕ ಯಾವುದೇ ನಾಗರಿಕರು ನಗರದಾದ್ಯಂತ ಬ್ಲಾಕ್‌ಸ್ಪಾಟ್‌ಗಳು ಮತ್ತು ಕಸದ ತೊಟ್ಟಿಗಳನ್ನು ಕುರಿತು ವರದಿ ಮಾಡಬಹುದು ಹಾಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ’ ಎಂದು ಸಿಟಿಜನ್ಸ್ ಫಾರ್ ಹೊಸಕೆರೆಹಳ್ಳಿ ಲೇಕ್‌ನ ರಚನಾ ರವಿಕಿರಣ್‌ ಹೇಳಿದರು.

‘ಕ್ಲೀನ್ ಬೆಂಗಳೂರು ಸೈಟ್‌ನೊಂದಿಗೆ ಕಾರ್ಯಾಗಾರಗಳ ಮೂಲಕ ನಗರದಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆಗೆ ಕೊಡುಗೆ ನೀಡಲು ಸರ್ಕಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ವ್ಯಕ್ತಿಗಳ ಬಲವಾದ ಜಾಲ ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು jhatkaa.orgಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT