ಜುಲೈ 25ರಂದು ರಾತ್ರಿ 10 ಗಂಟೆ ಸುಮಾರಿಗೆ ಅಪರಿಚಿತನೊಬ್ಬ, ಪಿಪಿಇ ಕಿಟ್ ಧರಿಸಿ ಕೇಂದ್ರದೊಳಗೆ ಬಂದಿದ್ದ. ಆತನಿಂದಲೇ ಲೈಂಗಿಕ ಕಿರುಕುಳ ಆಗಿರುವುದಾಗಿ ಸೋಂಕಿತೆ, ಚಿಕಿತ್ಸಾ ಕೇಂದ್ರದ ನೋಡಲ್ ಅಧಿಕಾರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಆಸ್ಪತ್ರೆಯ ಮುಖ್ಯಸ್ಥ ಡಾ. ಬಾಲಾಜಿ ಪೈ ಅವರು ಠಾಣೆಗೆ ದೂರು ನೀಡಿದ್ದಾರೆ. ‘ಲೈಂಗಿಕ ಕಿರುಕುಳ (ಐಪಿಸಿ 354(ಎ)) ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.