ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಮುಚ್ಚಿಸಿದ ಪೊಲೀಸರು: ಆಕ್ಷೇಪ

Last Updated 25 ಏಪ್ರಿಲ್ 2021, 22:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ತಡೆಗಾಗಿ ಜಾರಿಯಾಗಿರುವ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಯಡಿ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಯಮ ತಿಳಿಯದ ಕೆಲ ಪೊಲೀಸರು ಹೋಟೆಲ್‌ಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

‘ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ಈ ವೇಳೆ ಅಗತ್ಯ ಸೇವೆಗಳಿಗೆ ಸರ್ಕಾರವೇ ಅನುಮತಿ ನೀಡಿದೆ. ಹೋಟೆಲ್‌ಗಳನ್ನೂ ಅಗತ್ಯ ಸೇವೆಯಡಿ ಪರಿಗಣಿಸಿ, ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಿದೆ. ಆದರೂ, ಶನಿವಾರ ಹಾಗೂ ಭಾನುವಾರ ನಗರದ ವಿವಿಧೆಡೆ ಪೊಲೀಸರು ಹೋಟೆಲ್‌ಗಳನ್ನು ಬಲವಂತವಾಗಿ ಮುಚ್ಚಿಸಿ ಅಡ್ಡಿಪಡಿಸಿದ್ದಾರೆ’ ಎಂದುಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.

‘ವಿಮಾನ ನಿಲ್ದಾಣ ರಸ್ತೆ, ಎನ್.ಆರ್.ಕಾಲೊನಿ, ನಾಗರಬಾವಿ ಸೇರಿದಂತೆ ಹಲವು ಭಾಗಗಳಲ್ಲಿ ಹೋಟೆಲ್‌ಗಳನ್ನು ಮುಚ್ಚಿಸಿದ್ದಾರೆ. ಸರ್ಕಾರದ ಸೂಚನೆಗಳನ್ನು ಅರಿತಿಲ್ಲದ ಪೊಲೀಸರು ಈ ರೀತಿ ಮಾಡಿದ್ದಾರೆ. ಈಗ ವ್ಯಾಪಾರ ನಡೆಸುವುದೇ ಹೋಟೆಲ್‌ಗಳ ಉದ್ದೇಶವಲ್ಲ. ಜನರಿಗೆ ಆಹಾರದ ಅಗತ್ಯವಿದೆ. ಅದಕ್ಕೆ ಅವಕಾಶವಿದ್ದರೂ ಅಡ್ಡಿಪಡಿಸುವುದು ಸರಿಯಲ್ಲ’ ಎಂದರು.‌

‘ಹೋಂ ಕ್ವಾರಂಟೈನ್‌ನಲ್ಲಿರುವ ಹಲವು ರೋಗಿಗಳಿಗೆ ಹೋಟೆಲ್‌ಗಳಿಂದಲೇ ಆಹಾರ ಪೂರೈಕೆಯಾಗುತ್ತಿದೆ. ಹಲವಾರು ಮಂದಿಹೋಟೆಲ್‌ಗಳನ್ನು ಅವಲಂಬಿಸಿದ್ದಾರೆ. ಶನಿವಾರ ಹಲವೆಡೆ ಹೋಟೆಲ್‌ ಮುಚ್ಚಿಸಿದ್ದರಿಂದ ಭಾನುವಾರವೂ ಕೆಲ ಹೋಟೆಲ್‌ಗಳನ್ನು ಮುಚ್ಚಲಾಗಿತ್ತು. ಇದರಿಂದ ಆಹಾರಕ್ಕೆ ಹೆಚ್ಚು ಸಮಸ್ಯೆಯಾಯಿತು. ಕೊರೊನಾ ಪರಿಸ್ಥಿತಿಯಲ್ಲಿ ಪೊಲೀಸರು ಹೋಟೆಲ್‌ಗಳಿಗೆ ಸಹಕಾರ ನೀಡಬೇಕು’ ಎಂದೂ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT